Publish Date: Tue, 22 Feb 2022 (14:42 IST)
Updated Date: Tue, 22 Feb 2022 (14:46 IST)
ರಶ್ಮಿಕಾ ಇದ್ಯಾವುದಕ್ಕೂ ಕ್ಯಾರೆ ಅನ್ನದೆ ಸದ್ಯ ಹೈದರಾಬಾದ್ನಲ್ಲಿ ಸೆಟಲ್ ಆಗಿದ್ದಾರೆ. ಆದರೆ, ಈಗ ಮತ್ತೆ ಕೊಡಗಿನ ಕಿತ್ತಳೆ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಸುದ್ದಿ ಸದ್ದು ಮಾಡುತ್ತಿದೆ. ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಬ್ರೇಕ್ ಅಪ್ ಆಗಿ ಬರೋಬರಿ 4 ವರ್ಷಗಳು ಕಂಪ್ಲೀಟ್ ಆಗಿವೆ. ಆದರೂ ಇವಾಗ ಯಾಕೆ ಈ ವಿಚಾರ ಮತ್ತೆ ಮುನ್ನೆಲೆಗೆ ಬಂತಪ್ಪ ಅಂದರೆ ರಶ್ಮಿಕಾ ಕೊಟ್ಟಿರುವ ಆ ಒಂದು ಹೇಳಿಕೆ. ಹೌದು ಇತ್ತೀಚಿಗೆ ಖಾಸಗಿ ಸಂದರ್ಶನ ಒಂದರಲ್ಲಿ ರಶ್ಮೀಕಾ ಮಂದಣ್ಣ ಮದುವೆ ವಿಚಾರವಾಗಿ ಒಪನ್ ಆಗಿ ಮಾತನಾಡಿದ್ದಾರೆ.
ಮದುವೆ ಯಾವಾಗ ಅನ್ನುವ ಪ್ರಶ್ನೆ ಕೇಳಿದ್ದಕ್ಕೆ, ನಾನು ಇನ್ನೂ ಚಿಕ್ಕವಳು ಮದುವೆ ಬಗ್ಗೆ ಯೋಚನೆ ಮಾಡುವಷ್ಟು ದೊಡ್ಡವಳಾಗಿಲ್ಲ ಎಂದು ಮಾತನಾಡಿದ್ದಾರೆ. ಇನ್ನೂ ರಶ್ಮಿಕಾ ಉತ್ತರ ಈಗ ಎಲ್ಲ ಕಡೆ ವೈರಲ್ ಆಗಿದೆ. ಜೊತೆಗೆ ಕಿರಿಕ್ ಹುಡುಗಿ ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಆಗಿದ್ದಕ್ಕೆ ರೀಸನ್ ಕೊಟ್ಟಿದ್ದಾರೆ ಅನ್ನುವ ವಿಷಯ ಸೋಷಿಯಲ್ ಮೀಡಿಯಾ ಅನ್ನುವ ಸಾಗರದಲ್ಲಿ ಈಜಾಡುತ್ತಿದೆ. ಹೌದು, ಈ ತರ ಚರ್ಚೆ ಆಗುವಯದಕ್ಕೂ ಗಟ್ಟಿ ಕಾರಣ ಇದೆ.
geetha
Publish Date: Tue, 22 Feb 2022 (14:42 IST)
Updated Date: Tue, 22 Feb 2022 (14:46 IST)