ಪ್ರತಿ ವರ್ಷಕ್ಕಿಂತ ಹೆಚ್ಚಿನ ಮಳೆ ಈ ಬಾರಿ ಸುರಿದಿರೋದ್ರಿಂದ ಮಾರುಕಟ್ಟೆಯಲ್ಲಿ ಶೇಂಗಾ ಬೆಳೆಯ ಬೆಲೆಯಲ್ಲಿ ಇಳಿಮುಖಗೊಂಡಿದೆ.
ತೀವ್ರ ಅತೀವೃಷ್ಠಿ ಸಂಭವಿಸಿದ್ದರಿಂದ ರೈತರು ಬೆಳೆದ ಶೇಂಗಾ ಬೆಳೆಯೂ ಹಾಳಾಗಿದೆ. ಅಳಿದುಳಿದ ಬೆಳೆಗೆ ಪೂರಕ ಬೆಲೆ ಸಿಗುತ್ತಿಲ್ಲ.
ಈ ಮೊದಲು ಶೇಂಗಾ ಬೆಳೆಗೆ ಕ್ವಿಂಟಾಲ್ ಗೆ 8000 ರೂ. ಬೆಲೆ ಕಾಣುತ್ತಿದ್ದ ಶೇಂಗಾ ದಿಢಿರನೇ ಕುಸಿದಿದ್ದು ಸದ್ಯ ಕ್ವಿಂಟಾಲ್ ಗೆ 4000 ಬೆಲೆಗೆ ಇಳಿದಿದೆ. ಈ ಪ್ರಮಾಣ ಬೆಲೆ ಇಳಿಕೆಯ ಕಾರಣ ರೈತ ಬಾಂಧವರು ಆತಂಕದಲ್ಲಿದ್ದಾರೆ.
ಶೇಂಗಾಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಬೆಳೆಗಾರರು ಒತ್ತಾಯ ಮಾಡಿದ್ದಾರೆ.