Select Your Language

Notifications

webdunia
webdunia
webdunia
webdunia

ರೇಪ್ ಕೇಸ್‌: ದೇವರಾಜೇಗೌಡ ತೀವ್ರ ವಿಚಾರಿಸುತ್ತಿರುವ ಪೊಲೀಸ್ ತಂಡ

Devrajegowda

Sampriya

ಬೆಂಗಳೂರು , ಶನಿವಾರ, 11 ಮೇ 2024 (16:02 IST)
ಬೆಂಗಳೂರು: ಮಹಿಳೆಯೊಬ್ಬರು ನೀಡಿದ ಲೈಂಗಿಕ ದೌರ್ಜನ್ಯ ದೂರಿನ ಸಂಬಂಧ ಬಂಧಿಯಾಗಿರುವ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಪೊಲೀಸರು ಕಳೆದ ಒಂದು ಗಂಟೆಯಿಂದ ತೀವ್ರವಾದ ವಿಚಾರಣೆ ನಡೆಸುತ್ತಿದ್ದಾರೆ.

ಹೊಳೆನರಸೀಪುರದ ಕಚೇರಿಯಲ್ಲಿ ದೇವರಾಜೇಗೌಡ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ಬಗ್ಗೆ ದೇವರಾಜೇಗೌಡ ಅವರಲ್ಲಿ ಎಸ್ಪಿ ಮಹಮದ್ ಸುಜೇತಾ, ಎ‌ಎಸ್‌ಪಿ ವೆಂಕಟೇಶ್ ನಾಯ್ಡು, ಡಿವೈಎಸ್‌ಪಿ ಅಶೋಕ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್‌ ಪೊಲೀಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.


ಇನ್ನು ದೇವರಾಜೇಗೌಡ ವಿರುದ್ಧ ಕಳೆದ ಮಾರ್ಚ್‌‌ನಲ್ಲಿ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಹಾಗೂ  2017 ರಲ್ಲಿ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ  ನಂತರ ಕೂಡಲೇ ದೇವರಾಜೇಗೌಡರನ್ನು ‌ಕೆಲವೇ ಕ್ಷಣಗಳಲ್ಲಿ ಬಂಧನ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಡಗು ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಹತ್ಯೆ: ಮರದ ಮೇಲಿತ್ತು ರುಂಡ!