Publish Date: Mon, 05 Feb 2018 (10:27 IST)
Updated Date: Mon, 05 Feb 2018 (10:30 IST)
ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ, ಮಾಜಿ ಸಂಸದೆ ರಮ್ಯಾ ಮಾಡಿದ ಟ್ವೀಟ್ ಒಂದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಟಾಪ್ ಅಂದರೆ ಟೊಮೆಟೊ, ಆನಿಯನ್, ಪೊಟೇಟೋ ನನ್ನ ಆದ್ಯತೆ ಅಂದಿದ್ದರು. ಇದಕ್ಕೆ ನಟಿ ರಮ್ಯಾ ಟಾಪ್ ಅಲ್ಲ ಪಾಟ್ ಎಂದಿದ್ದರು. ಅಷ್ಟೇ ಅಲ್ಲದೆ, ಪಾಟ್ (ಅಮಲು ಪದಾರ್ಥ ಎಂಬರ್ಥ) ನ ಅಮಲಿನಲ್ಲಿ ಹೀಗೆ ಮಾತನಾಡಿದ್ದೀರಾ ಎಂದು ವ್ಯಂಗ್ಯವಾಡಿದ್ದರು.
ಈ ಟ್ವೀಟ್ ಈಗ ರಮ್ಯಾಗೆ ತಿರುಗುಬಾಣವಾಗಿದೆ. ದೇಶದ ಪ್ರಧಾನಿ ವಿರುದ್ದ ಇಷ್ಟು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಈ ಮೂಲಕ ರಮ್ಯಾ ದೇಶದ ಜತೆಗೇ ಅವಮಾನ ಮಾಡಿದ್ದಾರೆ. ರಮ್ಯಾ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಇದೇ ರೀತಿ ಅಭಿಪ್ರಾಯ ಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ