Publish Date: Wed, 24 Feb 2021 (10:04 IST)
Updated Date: Wed, 24 Feb 2021 (10:06 IST)
ಬೆಂಗಳೂರು: ರೈತ ಪ್ರತಿಭಟನೆಗೆ ಕುಮ್ಮಕ್ಕು ನೀಡಲು ಟೂಲ್ ಕಿಟ್ ಸೃಷ್ಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಧಿತೆಯಾಗಿದ್ದ ಬೆಂಗಳೂರು ಮೂಲದ ದಿಶಾ ರವಿಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ ನಟಿ ರಮ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಪ್ರಸ್ತಾಪಿಸಿರುವ ರಮ್ಯಾ, ಇದು ಕೇಂದ್ರ ಸರ್ಕಾರದ ರೈತ ಪ್ರತಿಭಟನೆಯನ್ನು ಹತ್ತಿಕ್ಕುವ ಹುನ್ನಾರದ ಭಾಗ. ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ನ್ಯಾಯದ ಪರ ದೇವರಿದ್ದಾನೆ ಎನ್ನುವುದನ್ನು ನ್ಯಾಯಾಲಯ ಕೊನೆಗೂ ಸಾಬೀತುಪಡಿಸಿದೆ ಎಂದು ರಮ್ಯಾ ಸಂತೋಷ ವ್ಯಕ್ತಪಡಿಸಿದ್ದಾರೆ.