Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ: ಪ್ರಮುಖ ಆರೋಪಿಯ ಬಂಧನ

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ: ಪ್ರಮುಖ ಆರೋಪಿಯ ಬಂಧನ

Sampriya

ಬೆಂಗಳೂರು , ಗುರುವಾರ, 28 ಮಾರ್ಚ್ 2024 (20:50 IST)
ಬೆಂಗಳೂರು:  ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಎರಡು ದಿನಗಳಲ್ಲಿ ರಾಜ್ಯದ ಹಲವೆಡೆ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದರು. ಬಂಧಿತ ಆರೋಪಿಯನ್ನು ಮುಝಮ್ಮಿಲ್ ಶರೀಫ್ ಎಂದು ಗುರುತಿಸಲಾಗಿದೆ.

ಈತನಿಗಾಗಿ ಎನ್​ಎಐ ಅಧಿಕಾರಿಗಳು ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು. ಈತ ಬ್ಲಾಸ್ಟ್​ಗೆ ಬಳಸಿದ್ದ ಬಾಂಬ್​ ತಯಾರಿಸಲು ಪ್ರಮುಖ ಪಾತ್ರ ವಹಿಸಿದ್ದ. ಅಲ್ಲದೇ ಮುಸಾವೀರ್​ ಹುಸೇನ್​ಗೆ ತುಂಬಾ ಆಪ್ತನಾಗಿದ್ದ ಎಂದು ತಿಳಿದು ಬಂದಿದೆ.

ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು ಎಂದು ಎನ್​ಎಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ಳು ಹೇಳುವವರೊಂದಿಗೆ ಕಣ್ಣೀರು ಹಾಕುವವರು ಜತೆಯಾಗಿದ್ದಾರೆ: ಮೈತ್ರಿ ನಾಯಕರಿಗೆ ಡಿ.ಕೆ.ಸುರೇಶ್ ಟಾಂಗ್