Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಮೆಡ್ - ಕೆ ರದ್ದು ಮಾಡಲು ಮುಂದಾದ ರಾಜ್ಯಸರ್ಕಾರ

ಕಾಮೆಡ್ - ಕೆ ರದ್ದು ಮಾಡಲು ಮುಂದಾದ ರಾಜ್ಯಸರ್ಕಾರ
bangalore , ಗುರುವಾರ, 28 ಜುಲೈ 2022 (20:04 IST)
ಮುಂದಿನ ವರ್ಷದಿಂದ ಕಾಮೆಡ್-ಕೆ ರದ್ದು ಮಾಡಲು  ರಾಜ್ಯ ಸರ್ಕಾರ ಮುಂದಾಗಿದೆ.ಉನ್ನತ ಶಿಕ್ಷಣ ಸಚಿವರ ಹೇಳಿಕೆಗೆ ಕಾಮೆಡ್ -ಕೆ ವಿರೋಧ ವ್ಯಕ್ತಪಡಿಸಿದೆ.ಸಚಿವರ ಏಕಪಕ್ಷೀಯ ನಿರ್ಧಾರಕ್ಕೆ ಕಾಮೆಡ್-ಕೆ ಕಾರ್ಯದರ್ಶಿ ಎಸ್.ಕುಮಾರ್ ಅಸಮಾಧಾನ ವ್ಯಕ್ತಪಡಿಸಿದಾರೆ.ನಮಗೆ ಮಾಹಿತಿಯೇ ನೀಡದೆಯೇ ಹೇಗೆ ಕಾಮೆಡ್-ಕೆ ವಿಲೀನ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.ಈ ಕುರಿತು ನಮ್ಮೊಂದಿಗೆ ಯಾವುದೇ ಸಭೆ ನಡೆಸಿಲ್ಲ.ರಾಜ್ಯ ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ಮಾಡಲಿ, ಇಲ್ಲವಾದಲ್ಲಿ ನಾವು ಕೋರ್ಟ್ ಮೊರೆ ಹೋಗ್ತೀವಿ ಅಂತಾ ಕಾಮೆಡ್-ಕೆ ನಿರ್ದೇಶಕ ಹೇಳ್ತಿದ್ದಾರೆ.
 
ಕಾಮೆಡ್-ಕೆ ವಿಲೀನ ಮಾಡೋದು ಸರಿ ಅಲ್ಲ.ಕಳೆದ 18 ವರ್ಷಗಳಿಂದ ದೇಶದಲ್ಲಿ ಕಾಮೆಡ್-ಕೆ ಇದೆ.ಪ್ರತಿ ವರ್ಷ 70 ಸಾವಿರ ಅಭ್ಯರ್ಥಿಗಳು ಕಾಮೆಡ್-ಕೆ ಪರೀಕ್ಷೆಗೆ ನೊಂದಣಿ ಮಾಡಿಕೊಳ್ತಾರೆ.10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಸೀಟ್ ನ ಅಡಿ ಇಂಜಿನಿಯರಿಂಗ್ ಕೋರ್ಸ್ ಪ್ರವೇಶ ಪಡೆಯುತ್ತಾರೆ.ಏಕಾಏಕಿ ಕಾಮೆಡ್-ಕೆ ವಿಲೀನ ಅನ್ನೋದು ಎಷ್ಟು ಸರಿ.ಶೀಘ್ರವೇ ಸರ್ಕಾರದ ಭೇಟಿಗೆ ಮುಂದಾಗ್ತೀವಿ  ಎಂದು ಕಾಮೆಡ್-ಕೆ ಕಾರ್ಯದರ್ಶಿ ಎಸ್  ಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ರಮವಾಗಿ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳ ಹಾವಳಿ