Publish Date: Sat, 11 Dec 2021 (14:32 IST)
Updated Date: Sat, 11 Dec 2021 (14:50 IST)
ಶಬರಿಮಲೆಯ ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಕೆ ಎಸ್ ಆರ್ ಟಿಸಿಯಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ರಾಜಹಂಸ ಬಸ್ ಸಂಚಾರವನ್ನು ಆರಂಭಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಸಾರ್ವಜನಿಕರು &
ಅಯ್ಯಪ್ಪನ ಭಕ್ತಾಧಿಗಳ ಅನುಕೂಲಕ್ಕಾಗಿ ಇದೇ ತಿಂಗಳ ದಿನಾಂಕ 15 ರಿಂದ ಬೆಂಗಳೂರಿನಿಂದ ಪಂಪಾ, ನೀಲಕಲ್ ಮಾರ್ಗದಲ್ಲಿ ನೂತನ ರಾಜಹಂಸ ಬಸ್ ಸಂಚಾರವನ್ನು ಆರಂಭಿಸುವುದಾಗಿ ತಿಳಿಸಿದೆ.ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡುವಂತ ರಾಜಹಂಸ ಬಸ್, ಪಂಪಾವನ್ನು ಮರುದಿನ ತಲುಪಲಿದೆ. ಇದಕ್ಕಾಗಿ 950 ರೂಪಾಯಿ ಟಿಕೆಟ್ ದರ ನಿಗದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.