Publish Date: Wed, 29 Apr 2020 (08:58 IST)
Updated Date: Wed, 29 Apr 2020 (09:00 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಮಳೆರಾಯ ರಾಗ ಹಾಡುತ್ತಿದ್ದಾನೆ. ಬೆಳಗಿನ ಜಾವದಿಂದಲೇ ಭಾರೀ ಮಳೆಯಾಗುತ್ತಿದೆ.
ಮೆಜೆಸ್ಟಿಕ್, ಶಾಂತಿ ನಗರ ಸೇರಿದಂತೆ ನಗರದ ಎಲ್ಲಾ ಕಡೆ ಭಾರೀ ಮಳೆಯಾಗುತ್ತಿದೆ. ಹೀಗಾಗಿ ವಿದ್ಯುತ್ ಕೂಡಾ ಕೈ ಕೊಟ್ಟಿದ್ದು, ಜನ ಜೀವನದ ಮೇಲೆ ಪರಿಣಾಮ ಬೀರಿದೆ.
ಇನ್ನು, ಕೊರೋನಾದಿಂದಾಗಿ ಸೀಲ್ ಡೌನ್ ಗೊಳಗಾಗಿರುವ ಹೊಂಗಸಂದ್ರದಲ್ಲಿ ಮಳೆಗೆ ಮನೆಯೊಳಗೆ ನೀರು ನುಗ್ಗಿದ್ದು, ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮನೆಯಿಂದ ಹೊರ ಹೋಗಲಾಗದೇ ಸಂಕಷ್ಟ ಅನುಭವಿಸುತ್ತಿದ್ದ ಜನತೆಗೆ ಮಳೆರಾಯ ತಂಪು ನೀಡಿದ್ದಾನೆ.