Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೈಲ್ವೇ ಜಾಲ, ರುಪೇಗೆ ಮೋದಿಯಿಂದ ಚಾಲನೆ

ರೈಲ್ವೇ ಜಾಲ, ರುಪೇಗೆ ಮೋದಿಯಿಂದ ಚಾಲನೆ
ನೇಪಾಳ , ಭಾನುವಾರ, 3 ಏಪ್ರಿಲ್ 2022 (08:32 IST)
ಕಠ್ಮಂಡು : ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಸಹವರ್ತಿ ಶೇರ್ ಬಹದ್ದೂರ್ ದೇವುಬಾ ಶನಿವಾರ ಗಡಿಯಾಚೆಗಿನ ರೈಲ್ವೇ ನೆಟ್ವರ್ಕ್,

ವಿದ್ಯುತ್ ಪ್ರಸರಣ ಮಾರ್ಗವನ್ನು ಉದ್ಘಾಟಿಸಿದರು ಹಾಗೂ ಭಾರತದ ರುಪೇ ಪಾವತಿ ಕಾರ್ಡ್ ಅನ್ನು ನೇಪಾಳದಲ್ಲಿ ಪ್ರಾರಂಭಿಸಿದರು.

ಮೋದಿ ಹಾಗೂ ದೇವುಬಾ ಉದ್ಘಾಟನೆ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ರೈಲ್ವೇ ಹಾಗೂ ಇಂಧನ ಕ್ಷೇತ್ರಗಳಲ್ಲಿ ಸಹಕಾರಗಳನ್ನು ಮುಂದುವರಿಸಲು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಉಭಯ ದೇಶಗಳ ನಡುವಿನ ಗಡಿ ಸಮಸ್ಯೆಗಳನ್ನು ಚರ್ಚಿಸಲಾಗಿದೆ ಹಾಗೂ ಅವುಗಳನ್ನು ಪರಿಹರಿಸಲು ಮೋದಿಗೆ ಒತ್ತಾಯಿಸಲಾಗಿದೆ ಎಂದು ದೇವುಬಾ ತಿಳಿಸಿದರು. 

ಭಾರತ ಹಾಗೂ ನೇಪಾಳದ ಸ್ನೇಹಮಯ ಸಂಬಂಧ ಅತ್ಯಂತ ವಿಶೇಷವಾದುದು. ಇಂತಹ ಭಾಂದವ್ಯ ಬೇರೆ ಯಾವ ದೇಶಗಳಲ್ಲೂ ಕಾಣಿಸಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಬಾಂಬ್ ಸ್ಫೋಟ!