ನಷ್ಟದಲ್ಲಿರುವ ದೇನಾ ಬ್ಯಾಂಕ್ ಜೊತೆ ಲಾಭದಲ್ಲಿರುವ ವಿಜಯಬ್ಯಾಂಕ್ ನ್ನು ವಿಲೀನಗೊಳಿಸುವ ಕೇಂದ್ರ ಸರಕಾರದ ನಿರ್ಧಾರ ಖಂಡನೀಯ ಎಂದು ಮಾಜಿ ಸಚಿವ ರಮನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಜಿ ಸಚಿವ ರಮನಾಥ ರೈ ಹೇಳಿಕೆ ನೀಡಿದ್ದು, ಈ ವೀಲೀನ ಪ್ರಕ್ರಿಯೆಗೆ ದ. ಕ ಜಿಲ್ಲಾ ಕಾಂಗ್ರೆಸ್ ವಿರೋಧಿಸುತ್ತದೆ ಎಂದರು.
ಲಾಭದಲ್ಲಿರುವ ಬ್ಯಾಂಕನ್ನು ನಷ್ಟದಲ್ಲಿರುವ ದೇನಾ ಬ್ಯಾಂಕ್ ಜೊತೆಗೆ ವಿಲೀನ ಮಾಡುವುದನ್ನು ಜಿಲ್ಲೆಯ ಜನತೆ ವಿರೋಧಿಸಬೇಕು ಎಂದು ಕರೆ ನೀಡಿದ ಅವರು, ಜಿಲ್ಲೆಯ ಜನತೆ ಜಾತಿ, ಮತ, ಭೇದ ಮರೆತು ಇದರ ವಿರುದ್ಧ ಹೋರಾಟ ಮಾಡಬೇಕು ಎಂದರು.
ವಿಲೀನ ಪ್ರಕ್ರೀಯೆಯ ವಿರೋಧವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. 87 ವರ್ಷದ ಬ್ಯಾಂಕನ್ನು 4 ವರ್ಷ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಮರ್ಜ್ ಮಾಡಲು ಮುಂದಾಗಿದೆ. ಈ ಹಿಂದೆ ಎಸ್ ಬಿ ಐ ಜೊತೆಯಲ್ಲಿ ಇತರ ಸ್ಟೇಟ್ ಬ್ಯಾಂಕ್ ಗಳನ್ನು ವಿಲೀನಗೊಳಿಸಲಾಯಿತು. ಇದರಿಂದ ಬ್ಯಾಂಕ್ ನ ಪರಿಸ್ಥಿತಿ ಸರಿಯಿಲ್ಲ ಎಂದು ದೂರಿದರು.
ವಿಜಯ ಬ್ಯಾಂಕ್ ವಿಲೀನದಿಂದ ಜಿಲ್ಲೆಯ ಜನತೆ, ಗ್ರಾಹಕರು ಮತ್ತು ನೌಕರರು ಮಾನಸಿಕವಾಗಿ ವೇದನೆ ಪಡಲಿದ್ದಾರೆ.
ಎ. ಬಿ. ಶೆಟ್ಟಿ ಆರಂಭಿಸಿದ ವಿಜಯ ಬ್ಯಾಂಕ್ ಒಂದು ಸಮುದಾಯದ ಬ್ಯಾಂಕ್. ಈ ಸಮುದಾಯದ ಬ್ಯಾಂಕ್ ಗೆ ಜಿಲ್ಲೆಯ ಸಂಸದರು ಸೇರಿದ್ದಾರೆ ಆದರೆ ಅವರು ಮೌನವಾಗಿರುವುದು ದುಃಖದ ವಿಚಾರ ಎಂದು ಟೀಕಿಸಿದರು.