ಬಿಜೆಪಿಯವರು ಸುಳ್ಳಿನ ಸೃಷ್ಠಿಕರ್ತರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ವಿಶ್ವನಾಥ ಹೇಳಿಕೆ ನೀಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರೀಯ ಪಕ್ಷದಿಂದ ಸಾಲಮನ್ನಾದಂಥ ತೀರ್ಮಾನ ಅಸಾಧ್ಯವಾದದು. ಪ್ರಾದೇಶಿಕ ಪಕ್ಷವಾದ್ದರಿಂದ ಜನರ ಸಮಸ್ಯೆ ಆಲಿಸಿ ಸಾಲಮನ್ನಾ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆ ತುಂಬಾ ಇದೆ ಎಂದರು.
ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಮುಖ ನೋಡಬೇಕಾಗುತ್ತದೆ. ಹತ್ತು ದಿನಗಳಲ್ಲಿ ಜೆಡಿಎಸ್ ರಾಜ್ಯ ಮತ್ತು ಜಿಲ್ಲಾ ಮತ್ತು ಬ್ಲಾಕ್ ಸಮಿತಿ ಪುನರಚನೆ ಮಾಡಲಾಗುತ್ತದೆ ಎಂದ ಅವರು, ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಆಡಳಿತದ ಸಮ್ಮಿಶ್ರ ಸರ್ಕಾರದಿಂದ ಸಾಲಮನ್ನಾ ಮಾಡಲಾಗಿದೆ.
ರಾಜಕೀಯ ಗೊಂದಲಗಳು ಇದ್ದದ್ದು ನಿಜ. ಈಗ ರಾಜಕೀಯ ಗೊಂದಲಗಳ ಮೋಡ ಸರಿದಿದೆ. ಬಿಜೆಪಿ ರಾಜಕೀಯ ಗೊಂದಲ ಸೃಷ್ಠಿಸಿದೆ. ಬಿಜೆಪಿಯವರು ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಅಂತಾರೆ ಆದರೆ ಈ ಹಿಂದೆ ಬಿಜೆಪಿಯವರು ಅಪವಿತ್ರ ಮೈತ್ರಿ ಮಾಡಿಕೊಂಡಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ವಿರೋಧ ಪಕ್ಷವಾಗಿ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಪ್ರವಾಹ ಪೀಡಿತ ಕೊಡಗಿಗೆ ಬಿಜೆಪಿಯವರು ಯಾಕೆ ಹೋಗಿಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.