Publish Date: Sun, 11 Feb 2018 (12:12 IST)
Updated Date: Sun, 11 Feb 2018 (12:14 IST)
ಕೊಪ್ಪಳ: ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೋಡಲು ಕೊಪ್ಪಳದಲ್ಲಿ ಜನ ಸಾಗರವೇ ಸೇರಿದೆ.
ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಮತ್ತಿತರ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ಕುಷ್ಟಗಿಯಲ್ಲಿ ರೋಡ್ ಶೋ ನಡೆಸಿದ ನಂತರ ಗಂಗಾವತಿಯಲ್ಲೂ ರಾಹುಲ್ ರೋಡ್ ಶೋ ನಡೆಸಲಿದ್ದಾರೆ. ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್ ಮಾತನಾಡಲಿದ್ದಾರೆ.
ಈ ನಡುವೆ ದಿಡೀರ್ ಆಗಿ ಇಲ್ಲಿನ ಪ್ರಮುಖ ಮಠಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಗುಜರಾತ್ ನಲ್ಲಿ ನಡೆಸಿದ ಮೃದು ಹಿಂದುತ್ವ ಧೋರಣೆಯನ್ನು ರಾಹುಲ್ ಇಲ್ಲೂ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ