Select Your Language

Notifications

webdunia
webdunia
webdunia
webdunia

ಕೋಲಾರಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿ- ಸಲೀಂ

ಕೋಲಾರಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿ- ಸಲೀಂ
bangalore , ಬುಧವಾರ, 5 ಏಪ್ರಿಲ್ 2023 (20:20 IST)
ಏಪ್ರಿಲ್.10 ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಅವರು ಆಗಮಿಸುತ್ತಿರುವ ಹಿನ್ನಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ನೇತೃತ್ವದಲ್ಲಿ ದೆಹಲಿಯ ತಂಡ ಕೋಲಾರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ರು‌. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ, ಏಪ್ರಿಲ್ ,10 ರಂದು ಕೋಲಾರದಲ್ಲಿ ಜೈ‌ ಭಾರತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ, ರಾಜಸ್ಥಾನ, ಛತ್ತೀಸ್ ಘಡ್ ಹಾಗೂ ಹಿಮಾಚಲ ಪ್ರದೇಶದ ಸಿಎಂಗಳು ಭಾಗವಹಿಸಲಿದ್ದಾರೆ ಎಂದರು. ಅಲ್ಲದೆ ಈ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಲಿದ್ದು, ರಾಹುಲ್ ಗಾಂಧಿ ಅವರ ವಿರುದ್ದ ಬಿಜೆಪಿ ಅವರು ಮಾಡಿರುವ ಷಡ್ಯಂತ್ರದ ಕುರಿತು ಮಾತನಾಡಲಿದ್ದಾರೆ ಎಂದರು.

ಇನ್ನೂ ಬಿಜೆಪಿಯವರ ಹುನ್ನಾರಕ್ಕೆ ರಾಹುಲ್ ಗಾಂಧಿ ಹೆದರುವುದಿಲ್ಲ, ಕೋಟ್ಯಾಂತರ ಜನರ ಆಶೀರ್ವಾದ ಅವರ ಮೇಲೆ ಇದೆ, ಇದರೊಂದಿಗೆ ಅವರ ಜೊತೆ ಕಾಂಗ್ರೆಸ್ ಪಕ್ಷ  ಇದೆ ಎಂದು ಹೇಳಿದ್ರು. ಅಲ್ಲದೆ ರಾಜ್ಯದಲ್ಲಿ ಚುನಾವಣೆಯ ಕುರಿತು ವಾಹಿನಿಗಳಲ್ಲಿ ಸಮೀಕ್ಷೆ ಹೊರ ಬಿದಿದ್ದೆ ಈ ಹಿನ್ನಲೆಯಲ್ಲಿ, ಬಿಜೆಪಿಯವರು ಸೋಲುವ ಭೀತಿಯಲ್ಲಿ,ಭ್ರಮನಿರಸನಗೊಂಡಿರುವದರಿಂದ, ರಾಜ್ಯಕ್ಕೆ ರಾಹುಲ್ ಗಾಂಧಿ ಬರುವುದನ್ನು ತಡೆಯುತ್ತಿದೆ ಎಂದರು. ಇನ್ನೂ ಬಿಜೆಪಿಯಲ್ಲಿ ರೌಡಿಗಳು, ದಲ್ಲಾಳಿಗಳು ಹಾಗೂ ಭ್ರಷ್ಟಾಚಾರಿಗಳಿರುವಂತಹ ಸರ್ಕಾರ, ಮೋದಿ ಅವರೆ ಫೈಟರ್ ರವಿ ಅಂತಹ ರೌಡಿಗೆ ಕೈ ಮುಗಿಯುತ್ತಾರೆ, ಚುನಾವಣೆಯಲ್ಲಿ  ರೌಡಿಗಳಿಗೆ ಮಣೆ ಹಾಕಲು ಬಿಜೆಪಿ ಹೊರಟಿದೆ ಎಂದರು. ರಾಜ್ಯದಲ್ಲಿ  ಕಾಂಗ್ರೇಸ್ ಗೆ 150 ಸ್ಥಾನ ಬರುವುದು ಖಚಿತ, ಜೊತೆಗೆ ಭಾರತ್ ಜೊಡೋ ಕಾರ್ಯಕ್ರಮದಿಂದ ಬಿಜೆಪಿ ಹೆದರಿರುವ ಪರಿಣಾಮ ರಾಹುಲ್ ಗಾಂಧಿ ಅವರನ್ನ ತಡೆಯುವಂತಹ ಕೆಲಸ ಮಾಡುತ್ತಿದ್ದಾರೆ, ಆದರೆ ರಾಹುಲ್ ಗಾಂದಿಯನ್ನು ತಡೆಯುವ ಶಕ್ತಿ‌ ಯಾರಿಗೂ ಇಲ್ಲ ಎಂದು ಹೇಳಿದ್ರು. 
 
ಇನ್ನೂ ಕಾಂಗ್ರೇಸ್ ನಲ್ಲಿ ಎದ್ದಿರುವ ಸಿಎಂ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ, ರಾಜ್ಯದಲ್ಲಿ ಮೊದಲು ಬ್ರಷ್ಟ ಹಾಗೂ ಲೂಟಿಕೋರರ ಸರ್ಕಾರವನ್ನ ತೆಗೆಯುವಂತಹ ಕೆಲಸ ಆಗಬೇಕು.  ನಂತರ ಶಾಸಕರು ಹಾಗೂ ಹೈಕಮಾಂಡ್ ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆ ಎಂದರು. ಇನ್ನೂ ಯಾರು ಸಹ ಸಿಎಂ ಆಕಾಂಕ್ಷಿ ಆಗುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ನಮ್ಮ ಮೊದಲನೇ ಕರ್ತವ್ಯ ನಾವು ಅಧಿಕಾರಕ್ಕೆ ಬರಬೇಕು, ಜನ ವಿರೋದಿ ಸರ್ಕಾರ ಹೋಗಬೇಕು, ಈ ಸರ್ಕಾರವನ್ನ ತೆಗೆಯಬೇಕು ಎನ್ನುವುದು ಗುರಿ ಎಂದು ಹೇಳಿದ್ರು. ಇನ್ನೂ ಕಾಂಗ್ರೇಸ್ ನಲ್ಲಿ ಯಾವ ಗೊಂದಲ ಇಲ್ಲ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತಿದ್ದೇವೆ, ಈಗಾಗಲೇ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ್ದೇವೆ‌ , ಬಿಜೆಯವರುಗೆ ಇವತ್ತಿಗೂ ಪಟ್ಟಿ ಬಿಡುಗಡೆ ಮಾಡುವ ಶಕ್ತಿ ಇಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು. ಇನ್ನೂ ಬಿಜೆಪಿ ಅವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಇದು ಹಳಿ ತಪ್ಪಿದ ಡಬ್ಬ ಇಂಜಿನ್ ಸರ್ಕಾರ, ಈ ಸರ್ಕಾರಕ್ಕೆ ಯಾವುದೇ ಬದ್ದತೆ ಇಲ್ಲ ಎಂದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ದುರ್ವಾಸೆ, ಕಲುಷಿತ ನೀರು ಸೇವನೆಯಿಂದ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ ನಿವಾಸಿಗಳು..!