Publish Date: Fri, 15 Mar 2019 (15:08 IST)
Updated Date: Fri, 15 Mar 2019 (15:10 IST)
ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ್ರು ಬಂದ್ರು ಅಷ್ಟೆ , ರಾಹುಲ್ ಗಾಂದಿ ಬಂದ್ರೂ ಅಷ್ಟೆ, ಮಮತಾ ಬ್ಯಾನರ್ಜಿ ಬಂದ್ರು ಸರಿ ಅಥವಾ ಅವರೆಲ್ಲರೂ ಸೇರಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಚುನಾವಣೆ ನಿಲ್ಲಿಸಿದ್ರೂ ಅಷ್ಟೇ, ಗೆಲ್ಲೋದು ನಾವೇ. ಹೀಗಂತ ಕೇಂದ್ರ ಸಚಿವ ಹೇಳಿದ್ದಾರೆ.
ನಾನು ಎದುರಾಳಿ ಯಾರು ಅಂತ ತಲೆ ಕೆಡಿಸಿಕೊಳ್ಳೋದಿಲ್ಲ. ಗೆಲುವು ಹೇಗೆ ಅನ್ನೋದನ್ನು ನೋಡುತ್ತೇವೆ. ಹೀಗಂತ ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಉತ್ಸಾಹ ನೋಡಿ ಖುಷಿಯಾಗುತ್ತಿದೆ. ಕಳೆದ ಬಾರಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ವಿ. ಈ ಬಾರಿ ಅದಕ್ಕಿಂತ ಹೆಚ್ಚು ಲೀಡ್ ತೆಗೆದು ಕೊಳ್ಳೋದು ಹೇಗೆ ಅನ್ನೋದು ನೋಡ್ತೀವಿ ಎಂದ್ರು.
ಯಾರೇ ಬಂದರೂ ಗೆಲುವು ನಮ್ಮದೇ. ನಾನು ಓವರ್ ಕಾನ್ಫಿಡೆನ್ಸ್ ನಲ್ಲಿ ಹೇಳ್ತಾ ಇಲ್ಲ. ಆತ್ಮ ವಿಶ್ವಾಸದಲ್ಲಿ ಹೇಳ್ತಾ ಇದ್ದೀನಿ ಅಂತ ಹೇಳಿದ್ರು.