Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹಳಿಯಾಳದಲ್ಲಿ ಬಿಜೆಪಿ ಬಾವುಟ ಹಾರಿಸೋವರೆಗೂ ರಾಜಕೀಯ ಬಿಟ್ಟು ಹೋಗುವದಿಲ್ಲ. ಬೇಕಿದ್ದರೆ ಆರ್.ವಿ. ದೇಶಪಾಂಡೆ ಬಿಜೆಪಿಗೆ ಬರಲಿ ಅಥವಾ ಹೊಸಬರೇ ಅಭ್ಯರ್ಥಿಯಾಗಲಿ ಎಂದು ಕೇಂದ್ರ ಸಚಿವ ಅನಂತಕುಮಾರ ಹೇಳಿಕೆ ನೀಡಿದ್ದಾರೆ.
ಪರೋಕ್ಷವಾಗಿ ದೇಶಪಾಂಡೆಗೆ ಟಾಂಗ್ ಕೊಟ್ಟ ಸಚಿವ ಸಚಿವ ಅನಂತಕುಮಾರ. ಹಳಿಯಾಳ, ಯಲ್ಲಾಪುರದಲ್ಲಿ ಬಿಜೆಪಿ ಬಾವುಟ ಹಾರಿಸಿಯೇ ತೀರುತ್ತೇನೆ.ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.ಮುಂದಿನ ದಿನದಲ್ಲಿ ಆರೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.
ದೇಶದಲ್ಲೆ ದೊಡ್ಡ ಪಕ್ಷವಾದ ಕಾಂಗ್ರೆಸ್ ಗೆ ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡಿಯುವಂತಹ ಪರಿಸ್ಥಿತಿ ಬಂದಿದೆ. ಇದು ಈಗಿನ ಕಾಂಗ್ರೆಸ್ ಪಕ್ಷದ ಸ್ಥಿತಿಗತಿ.ರಾಜಕೀಯ ಪುಟಗೋಸಿಗಳು ಬಿಜೆಪಿಯವರಲ್ಲ. ರಾಜಕೀಯ ಏನು ಅನ್ನೋದನ್ನ ತಿಳಿದವರು ಬಿಜೆಪಿಯವರು ಮಾತ್ರ ಎಂದು ಹೇಳಿದ್ದಾರೆ.