Webdunia - Bharat's app for daily news and videos

Install App

ಡಿ.ಕೆ.ಶಿವಕುಮಾರ್ ಮುಖವಾಡದ ಸಿಎಂ, ರಾಜ್ಯಕ್ಕೆಲ್ಲ ನಾಮ ಹಾಕುತ್ತಾರೆ: ಆರ್.ಅಶೋಕ್

ಕೃಷ್ಣವೇಣಿ ಕೆ
ಶನಿವಾರ, 11 ಜುಲೈ 2026 (16:01 IST)
ಮೈಸೂರು: ಡಿ.ಕೆ.ಶಿವಕುಮಾರ್ ಅವರು ಮುಖವಾಡದ ಸಿಎಂ ಆಗಿದ್ದಾರೆ. ಊರಿಗೆಲ್ಲ, ರಾಜ್ಯಕ್ಕೆಲ್ಲ ನಾಮ ಹಾಕುತ್ತಾರೆ. ಅವರಿಗೆ ಬಾಂಗ್ಲಾದೇಶವರು ಓಟ್ ಬ್ಯಾಂಕ್ ಆಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದರು.
 
ಮೈಸೂರಿನ ಜಿ.ಕೆ.ಗ್ರೌಂಡ್ಸ್ ನಲ್ಲಿ ಮೈಸೂರಿನ ಕಾಯಕ ಸಮುದಾಯಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ನ ನೂತನ ಸದಸ್ಯ ರಘು ಆರ್ ಕೌಟಲ್ಯ ಅವರ ಅಭಿನಂದನೆ ಹಾಗೂ ಭಾರತೀಯ ಜನತಾ ಪಾರ್ಟಿಗೆ ಕೃತಜ್ಞತಾ ಸಮಾವೇಶದಲ್ಲಿ ಅವರು ಮಾತನಾಡಿದರು. ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಮತ್ತು ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
 
ರಘು ಕೌಟಲ್ಯ ಅವರಿಗೆ ಬಿಜೆಪಿ ವಿಧಾನ ಪರಿಷತ್‍ಗೆ ಅವಕಾಶ ನೀಡಿದೆ. ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡಬೇಕು ಎಂಬುದು ಬಿಜೆಪಿ ಉದ್ದೇಶ ಎಂದು ಆರ್.ಅಶೋಕ್ ತಿಳಿಸಿದರು. ಎಸ್‍ಐಆರ್‍ನಲ್ಲಿ ಎಲ್ಲರೂ ಭಾಗವಹಿಸಬೇಕಿದೆ. ದೇಶದ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯಬೇಕು. ನಮ್ಮ ದೇಶದಲ್ಲಿ ಲಕ್ಷಾಂತರ ಬಾಂಗ್ಲಾದೇಶ ಮತ್ತು ಪಾಕಿಸ್ತಾನಿಯರು ಇದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಅವರು ಮೂರು ಸಾವಿರಕ್ಕೆ ಬಾಂಗ್ಲಾದೇಶದವರಿಗೆ ಎಲ್ಲ ಸೌಲಭ್ಯ ನೀಡಿದ್ದರು. ಕರ್ನಾಟಕದಲ್ಲಿ ಬಾಂಗ್ಲಾದೇಶದವರನ್ನು ಮತಪಟ್ಟಿಗೆ ಸೇರಿಸಲು ಹುನ್ನಾರ ನಡೆಯುತ್ತಿದೆ. ಅದಕ್ಕೆಂದೇ ಶಾಶ್ವತ ನಿವಾಸಿ ಪತ್ರ ನೀಡಲು ಮುಂದಾಗಿದ್ದಾರೆ. ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರಕ್ಕೆ ಮಾತ್ರ ಪೌರತ್ವ ನೀಡುವ ಅಧಿಕಾರ ಹೊಂದಿದೆ. ಎಸ್‍ಐಆರ್‍ಗೆ ಕೌಂಟರ್ ಎಸ್‍ಐಆರ್ ನಡೆಯುತ್ತಿದೆ. ದೇಶದ ಕಾನೂನು ಕೆಡಿಸಲು ಇವರ ಸಹಕಾರ ಪಡೆಯುತ್ತಿದ್ದಾರೆ ಎಂದು ಆಕ್ಷೇಪಿಸಿದರು. 
 
ಡಿ.ಕೆ ಎಂದರೆ ಟೆಂಡರ್. ಏಕೆಂದರೆ ಅವರು ಅಧಿಕಾರದಲ್ಲಿ ಇರುವುದು ಕೆಲವೇ ದಿನಗಳಾದರೂ ಹಲವು ವರ್ಷಗಳ ಟೆಂಡರ್ ಕರೆದಿದ್ದಾರೆ. ಅವರು ಸಿಎಂ ಆಗಿರುವುದೇ ಟೆಂಡರ್ ಮೇಲೆ. ರಾಹುಲ್‍ಗಾಂಧಿ ಟೆಂಡರ್ ಹಾಕಿದ್ದರು. ಈಗ ಡಿ.ಕೆ  ಟೆಂಡರ್ ಹಿಡಿದಿದ್ದಾರೆ ಎಂದು ಬಣ್ಣಿಸಿದರು. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ವಿಷಯಕ್ಕೆ ಪ್ರಧಾನಿ, ಗೃಹ ಸಚಿಚರ ಸದನದಲ್ಲಿ ಉತ್ತರಿಸಬೇಕು: ಮಲ್ಲಿಕಾರ್ಜುನ ಖರ್ಗೆ

ಕಾರು ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣವಾದ ಅಪ್ರಾಪ್ತ, Deadly Video

ಮಿತವಾದಿ ಹಿಂದೂ ಆಗಿದ್ದೆ, ಇದೀಗ ಜಾಗೃತ ಹಿಂದೂ ಆಗಿ ಬದಲಾಗಿದ್ದೇನೆ: ಕಂಗನಾ ರನೌತ್

ಪೊಲೀಸ್ ಪರೀಕ್ಷೆ ಬಳಿಕ ಮೆಜೆಸ್ಟಿಕ್‌ನಲ್ಲಿ ರೈಲು ಹತ್ತುವಾಗ ಕಂಡ ಆಘಾತಕಾರಿ ವಿಡಿಯೋ ಇಲ್ಲಿದೆ

ಮಂತ್ರಿ ಆಗಕ್ಕೆ ಮಾಜಿ ಮುಖ್ಯ ಮಂತ್ರಿಗಳ ಮಕ್ಕಳೇ ಆಗಬೇಕಾ: ಕಾಂಗ್ರೆಸ್ ಗೆ ಬಿಗ್ ಶಾಕ್ ಕೊಟ್ಟ ಇಬ್ಬರು ಶಾಸಕರು

ಮುಂದಿನ ಸುದ್ದಿ
Show comments