Publish Date: Fri, 21 Sep 2018 (16:08 IST)
Updated Date: Fri, 21 Sep 2018 (16:14 IST)
ಬೆಂಗಳೂರು : ಸಿಎಂ ಕುಮಾರಸ್ವಾಮಿ ದಂಗೆ ಹೇಳಿಕೆಯನ್ನು ವಿರೋಧಿಸಿ ಬಿಜೆಪಿಯ ಮಾಜಿ ಡಿಸಿಎಂ ಆರ್. ಅಶೋಕ್ ಅವರು ಸಂವಿಧಾನದತ್ತ ಸ್ಥಾನದಲ್ಲಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ನಕ್ಸಲ್ ರೀತಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ದಂಗೆ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಂಗೆ ಎಂಬ ಪದವನ್ನು ಯಾರೂ ಪ್ರಯೋಗ ಮಾಡಲ್ಲ. ದಂಗೆ ಪದದ ಅರ್ಥ ಸಿಎಂ ಗೊತ್ತಿಲ್ಲ ಅಂತಾ ಕಾಣ್ಸುತ್ತೆ. ದಂಗೆ ಪದದ ಅರ್ಥವನ್ನು ಕುಮಾರಸ್ವಾಮಿ ಡಿಕ್ಷನರಿ ತೆಗೆದು ನೋಡಲಿ ಎಂದರು.
ಸರ್ಕಾರ ಇರುತ್ತೋ ಹೋಗುತ್ತೋ ಅನ್ನೋದು ಸ್ವತಃ ಸಿಎಂ ಹಚ್ಡಿಕೆಗೆ ಗೊತ್ತಿಲ್ಲ. ಸರ್ಕಾರದ ಮಂತ್ರಿಗಳು ಭಿನ್ನಮತ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಂತ್ರಿಗಿರಿ ಮಾಡದೇ ಇದ್ರೆ ಶಾಸಕರು ಸರ್ಕಾರ ಕೆಡುವುದಾಗಿ ಹೇಳ್ತಾರೆ. ಸಿಎಂಗೆ ತಾಕತ್ತಿದ್ದರೆ ಭಿನ್ನ ಮಂತ್ರಿಗಳು ಮತ್ತು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ