Webdunia - Bharat's app for daily news and videos

Install App

ಸ್ತಬ್ದವಾದ ಬೆಂಗಳೂರು ವಿಶ್ವವಿದ್ಯಾಲಯ

Webdunia
ಸೋಮವಾರ, 30 ಮೇ 2022 (21:01 IST)
ಬೆಂಗಳೂರು ವಿಶ್ವವಿದ್ಯಾಲಯ ಯಾವಾಗ್ಲೂ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತೆ. ಅಂದಹಾಗೆ ಇಂದು ಸಂಶೋಧನಾ ಮತ್ತು ಸ್ನಾತಕೋತ್ತರ  ವಿದ್ಯಾರ್ಥಿಗಳ ಮೇಲೆ ನೀಡಿರುವ ದೂರು ಹಿಂಪಡೆಯುವಂತೆ ಆಗ್ರಹಿಸಿ  ಯುನಿವರ್ಸಿಟಿ ಮುಂಭಾಗ ವಿದ್ಯಾರ್ಥಿಗಳು ಧರಣಿ ನಡೆಸಿದ್ರು.ಅಷ್ಟೇ ಅಲ್ಲದೆ ಯುನಿವರ್ಸಿಟಿಯಲ್ಲಿ  ದೊಡ್ಡ ಹೈಡ್ರಾಮವೇ ನಡೆದಿತ್ತು.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೊನ್ನೆ ದೊಡ್ಡ ಹೈಡ್ರಾಮವೇ ನಡೆದು ಹೋಗಿತ್ತು. ವಿತ್ತಾಧಿಕಾರಿ ಜಯಲಕ್ಷ್ಮೀ  ರಾತ್ರೋ ರಾತ್ರಿ ವಿಸಿಯೂ ಗಾಗಿ   28  ಕೋಟಿ ಹಣ ಬಿಡುಗಡೆಮಾಡಬೇಂದು ಸೈನ್ ಹಾಕಿಸಿಕೊಡಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಜಯಲಕ್ಷ್ಮೀ  ಸರಿಯಾಗಿ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ರಾತ್ರೋ ರಾತ್ರಿ ಸೈನ್ ಹಾಕಿಸಿಕೊಳ್ಳುವ ಅವಶ್ಯಕತೆಯಾದ್ರು ಏನಿದೆ ಎಂದು ಆಕ್ರೋಶ ಹೊರಹಾಖಿದ್ದಾರೆ. ಕೊನೆಗೂ ಕುಲಪತಿ ವೇಣುಗೋಪಾಲ್ ಮತ್ತು ವಿತ್ತಾಧಿಕಾರಿ ಜಯಲಕ್ಷ್ಮೀ ವಿರುದ್ಧ 2000 ಪ್ರತ್ಯೇಕ ದೂರು ಸಲ್ಲಿಸಲು ತೀರ್ಮಾನ ಮಾಡಿಕೊಂಡಿದ್ರು. ಕಾನೂನುಬಾಹಿರವಾಗಿ ಆಕ್ರಮ ಹಣ ವರ್ಗಾವಣೆಗೆ ಮುಂದಾಗಿದ್ದ  ವಿತ್ತಾಧಿಕಾರಿ ವಿರುದ್ಧ ದೂರ ದಾಖಲಿಸಲು ವಿದ್ಯಾರ್ಥಿಗಳು ಮುಂದಾಗ್ತಿದ್ದಂತೆ ಜಯಲಕ್ಷ್ಮೀ ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ಮುಖಂಡರ ಮೇಲೆ ದೂರು ದಾಖಲಿಸಿದ್ದಾರೆ. ಇದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ಹೌದು,  ಯುನಿವರ್ಸಿಟಿಯಲ್ಲಿ 28 ಕೋಟಿ ರಿಲೀಸ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್  ಪಡೆಯುತ್ತಿದೆ. ವಿತ್ತಾಧಿಕಾರಿ ಜಯಲಕ್ಷ್ಮೀ ವಿದ್ಯಾರ್ಥಿಗಳ ಮೇಲೆ ದೂರು ನೀಡಿದ ಬಳಿಕ ವಿದ್ಯಾರ್ಥಿಗಳು ಸಿಡಿದೆದ್ದಿದ್ರು.ಹೀಗಾಗಿ ವಿದ್ಯಾರ್ಥಿಗಳ ಮೇಲೆ ನೀಡಿರುವ ಕಂಪ್ಲೇಟ್ ನ್ನ ವಾಪಸ್ಸು ತೆಗೆದುಕೊಳ್ಳಬೇಕು. ನ್ಯಾಯ ಸಿಗಬೇಕು. ನಮ್ಮ ಹಣವನ್ನ ಬೇರೆ  ಕಾಲೇಜ್ ಗೆ ಬಳಸಿಕೊಳ್ಳಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ರು. ಅಷ್ಟೇ ಅಲ್ಲದೆ ಯುನಿವರ್ಸಿಟಿಯ ಸುಮಾರು 52 ವಿಭಾಗಗಳನ್ನ ಬಂದ್ ಮಾಡಿ ವಿದ್ಯಾರ್ಥಿಗಳು ಯುನಿವರ್ಸಿಟಿ ಮುಂಭಾಗ ಧರಣಿ ನಡೆಸಿದ್ರು .ತಮಟೆ ಹೊಡೆದು ಘೋಷಣೆ ಕೂಗಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ರು.

ಆಕ್ರಮ ಹಣ ವರ್ಗಾವಣೆಯನ್ನ ವಿವಿ ಮಾಡ್ತಿದೆ . ವಿತ್ತಾಧಿಕಾರಿ ಜಯಲಕ್ಷ್ಮೀ ಹಾಗೂ ವಿಸಿ ವಿರುದ್ಧ ಹೋರಾಡಿದಕ್ಕೆ ನಮ್ಮಗೆ ಕಾನೂನಿನ ಮೂಲಕ ಬೆದರಿಕೆ ಹಾಕ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಸಾಮಾಧಾನ ಹೊರಹಾಕಿದ್ರು. ಹಣಕಾಸು ಒಂದು ವಿಷಯಕ್ಕೆ ವಿವಿಯಲ್ಲಿ ದೊಡ್ಡ ರಂಪಾಟ-ರದ್ದಾಂತವೇ ನಡೆಯಿತ್ತು. ಬೆಂಗಳೂರು ವಿವಿಯ ಕುಲಸಚಿವ ಪ್ರೊ ಕೊಟ್ರೇಶ್ ವಿದ್ಯಾರ್ಥಿಗಳ ಮೇಲೆ ಹಾಕಿರುವ ದೂರನ್ನ ಹಿಂಪಡೆಯುವ ಬಗ್ಗೆ ಚರ್ಚೆ ಮಾಡಲಾಗುತ್ತೆ. fir ಹಿಂಪಡೆಯಲು ಕಾನೂನಿನಲ್ಲಿ ಅವಕಾಶ ಇದೆ. ಹೀಗಾಗಿ ವಿಸಿ ವಿದ್ಯಾರ್ಥಿಗಳ ಮೇಲೆ ಹಾಕಿರುವ  fir  ಹಿಂಪಡೆಯಲು ತಿಳಿಸಿದ್ದಾರೆ. ಈಗಾಗಲ್ಲೇ ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದಾರೆ. 14 ದಿನಗಳ ಕಾಲ ಎಫ್ ಐ ಆರ್ ಹೋಲ್ಡ್ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಮೇಲಿನ ಎಫ್ ಐ ಆರ್ ಹಿಂಪಡೆಯುತ್ತೇವೆ ಅಂದಿದ್ದಾರೆ. ಆದ್ರೆ ವಿದ್ಯಾರ್ಥಿಗಳು ಮಾತ್ರ  ಭರವೆಸೆಗೆ ಮಾತಿಗೆ ಜಾಗುತ್ತಿಲ್ಲ

ಒಟ್ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊತ್ತಿದ ಒಂದು ಕಿಡಿಯಿಂದ ಯುನಿವರ್ಸಿಟಿಯೇ ಅಲ್ಲೋಲ-ಕಲೋಲವಾಗೋಗಿದೆ.ವಿದ್ಯಾರ್ಥಿಗಳು ಭರವಸೆಯ ಮಾತನ್ನ ಕೇಳ್ತಿಲ್ಲ. ಇನ್ನೂ ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನು ದೂರನ್ನ ಸಂಪೂರ್ಣವಾಗಿ ಹಿಂಪಡೆಯುವವರೆಗೂ ವಿದ್ಯಾರ್ಥಿಗಳ ಅನಿರ್ದಿಷ್ಟವಾಧಿ ಧರಣಿ ನಿಲ್ಲಲ್ಲ. ಕುಲಸಚಿವರಿಗೆ ತಲೆನೋವು ತಪ್ಪಲ್ಲ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments