Publish Date: Tue, 21 Apr 2020 (14:52 IST)
Updated Date: Tue, 21 Apr 2020 (14:53 IST)
ಕೋವಿಡ್ -19 ನಿಯಂತ್ರಣ ವಿಚಾರದಲ್ಲಿ ಸಹಕಾರ ನೀಡದ ಮತ್ತು ಸೋಂಕಿತ ವ್ಯಕ್ತಿಯ ಶವ ಸಂಸ್ಕಾರದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಗೆ ಕ್ವಾರಂಟೈನ್ ಫಿಕ್ಸ್ ಆಗಲಿದೆ.
ಜಮೀರ್ ಅಹ್ಮದ್ ಗೆ ಕ್ವಾರಂಟೈನ್ ಅಗತ್ಯವಿದೆ. ಇದು ಶೀಘ್ರದಲ್ಲಿ ಆಗಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಕೋವಿಡ್ ಕಾಯಿಲೆ ನಿಯಂತ್ರಣದಲ್ಲಿ ಜಾತಿ, ಧರ್ಮ, ಬಡವ, ಶ್ರೀಮಂತ ಎಂದು ಇಲ್ಲ. ನಿಯಂತ್ರಣವೇ ಎಲ್ಲರ ಗುರಿಯಾಗಿರಬೇಕು. ಇಂತಹ ಸಂದರ್ಭದಲ್ಲಿ ಶಾಸಕ ಜಮೀರ್ ಅಹ್ಮದ್ ಪಾದರಾಯನಪುರ ಗಲಾಟೆ ವಿಷಯದಲ್ಲಿ ಗಲಾಟೆ ಮಾಡಿದವರ ಪರವಾಗಿ ಮಾತನಾಡಿದ್ದು ಸರಿಯಲ್ಲ.
ತಮ್ಮ ಪ್ರಾಣವನ್ನು ಬದಿಗೊತ್ತಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್, ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ಸರಿಯಲ್ಲ. ಜನರೊಂದಿಗೆ ಸರಕಾರಕ್ಕೆ ಪ್ರತಿಯೊಬ್ಬ ಜನಪ್ರತಿನಿಧಿ ಸಹಕರಿಸಬೇಕು ಎಂದರು.