Publish Date: Thu, 16 Dec 2021 (07:06 IST)
Updated Date: Thu, 16 Dec 2021 (08:08 IST)
ಬೆಂಗಳೂರು : ಅತ್ತೆಯನ್ನೇ ಕೊಲ್ಲಲು ಸೊಸೆಯೊಬ್ಬಳು ಖತರ್ನಾಕ್ ಪ್ಲಾನ್ ರೂಪಿಸಿ ವಿಫಲವಾಗಿರುವ ಘಟನೆ ನಡೆದಿರುವ ಬಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಊಟದಲ್ಲಿ ನಿದ್ರೆ ಮಾತ್ರೆ, ಜಿರಳೆ ಔಷಧಿ ಹಾಕಿ ಕೊಲ್ಲಲು ಸೊಸೆ ಯೋಜನೆ ಹಾಕಿದ್ದಳು. ಆದರೆ ಸೊಸೆ ಮಾಡಿದ್ದ ಅಡುಗೆ ತಿಂದು ಆಸೀಫ್ ಕುಟುಂಬ ಅಸ್ವಸ್ಥವಾಗಿದೆ.
ಈ ಹಿನ್ನೆಲೆಯಲ್ಲಿ ಪತ್ನಿ ಆಯಿಷಾ ವಿರುದ್ಧ ಪತಿ ಆಸೀಫ್ ಖಾನ್ ದೂರು ಕೊಟ್ಟಿದ್ದಾರೆ. ಆಯೀಷಾ ತನ್ನ ತಾಯಿ ಜೊತೆ ಮಾತಾಡಿರುವ ಆಡಿಯೋದಲ್ಲಿ ಸತ್ಯ ಬಯಲಾಗಿದೆ.
ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಆಯೀಷಾ, ಹುಸೇನ್ ಸಾಬ್, ಕಮರ್ ರಾಜ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.