Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಗಳೂರು : ಹಿಜಬ್ ಹೋರಾಟಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡರೂ ಯು.ಟಿ.ಖಾದರ್ ಸ್ಪಂದಿಸಿಲ್ಲ.
ಅವರೆಲ್ಲೋ ಕ್ರಿಕೆಟ್ ಆಡುತ್ತಿದ್ದಾರೆ ಎಂಬ ಕಾಲೇಜು ವಿದ್ಯಾರ್ಥಿನಿ ಗೌಸಿಯಾ ಆರೋಪಕ್ಕೆ ಶಾಸಕ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾಲೇಜಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಬ್ ಹೋರಾಟ ಮುಂದುವರಿದಿದೆ. ನಿನ್ನೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು, ನಮಗೆ ಸಲಹೆ, ಸಹಕಾರ ನೀಡುವಂತೆ ನಾಯಕರಾದ ಯು.ಟಿ.ಖಾದರ್ ಅವರನ್ನು ಸಂಪರ್ಕ ಮಾಡಿದ್ದೆವು.
ಅವರು ಸಹಾಯ ಮಾಡಿಲ್ಲ ಅವರೆಲ್ಲೋ ಕ್ರಿಕೆಟ್ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದರು. ವಿದ್ಯಾರ್ಥಿನಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಯು.ಟಿ.ಖಾದರ್, ಆ ವಿದ್ಯಾರ್ಥಿನಿ ಸುಳ್ಳು ಹೇಳುತ್ತಿದ್ದಾಳೆ.
ಸುಳ್ಳು ಹೇಳಿದ ವಿದ್ಯಾರ್ಥಿನಿಯನ್ನು ದೇವರು ಕ್ಷಮಿಸಲಿ, ಒಳ್ಳೆ ಬುದ್ದಿ ಕೊಡಲಿ. ನಾನು ಆ ವಿದ್ಯಾರ್ಥಿನಿಯ ಸುಳ್ಳನ್ನು ಕ್ಷಮಿಸುತ್ತೇನೆ ಎಂದು ಟಾಂಗ್ ನೀಡಿದ್ದಾರೆ.