Select Your Language

Notifications

webdunia
webdunia
webdunia
webdunia

ಆಗಸ್ಟ್ 29ರವರೆಗೆ ನೇರಳೆ ಮಾರ್ಗ ಸೇವೆ ವ್ಯತ್ಯಯ

ಆಗಸ್ಟ್ 29ರವರೆಗೆ ನೇರಳೆ ಮಾರ್ಗ ಸೇವೆ ವ್ಯತ್ಯಯ
bangalore , ಗುರುವಾರ, 17 ಆಗಸ್ಟ್ 2023 (14:58 IST)
ನೇರಳೆ ಮಾರ್ಗ ಮೆಟ್ರೋದಲ್ಲಿ ಮತ್ತೆ ಸಂಚಾರ ಬದಲಾವಣೆಯಾಗಿದೆ. ಆಗಸ್ಟ್ 17ರಿಂದ ಆಗಸ್ಟ್ 29ರವರೆಗೆ ರೈಲು ಸಂಚಾರ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ. ಬೈಯ್ಯಪ್ಪನಹಳ್ಳಿ TO ಕೆ.ಆರ್ ಪುರ ಮೆಟ್ರೋ ಮಾರ್ಗ ವಿಸ್ತರಣೆ, ಮತ್ತು ಕೆಂಗೇರಿ TO ಚಲ್ಲಘಟ್ಟ ಮೆಟ್ರೋ ಮಾರ್ಗ ಪೂರ್ಣಗೊಂಡಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗವನ್ನು ಎರಡು ಕಡೆಗಳಲ್ಲಿ ವಿಸ್ತರಣೆ ಮಾಡಿದೆ. ಮೆಟ್ರೋ ವಿಸ್ತರಣೆ ಆದ ಕಾರಣ ಈ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆ ರೂಪಿಸಲಾಗುವುದು. ಈ ಹಿನ್ನಲೆ ನೇರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ. ಆಗಸ್ಟ್ 17ರಂದು ಗುರುವಾರ ಕೆಂಗೇರಿ ಮತ್ತು ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ಮಧ್ಯೆ ಯಾವುದೇ ರೈಲು ಸೇವೆ ಇರುವುದಿಲ್ಲ. ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ, ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ರವರೆಗೆ ರೈಲು ಸೇವೆಗಳು ಲಭ್ಯವಿರುತ್ತದೆ. ಆಗಸ್ಟ್ 23 ಮತ್ತು 24ರಂದು ಕೆಂಗೇರಿಯಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ಮಧ್ಯೆ ಬೆಳಗ್ಗೆ 7 ಗಂಟೆ ತನಕ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗೆ 40% ಮಳೆ ಕೊರತೆ