ಮಡಿಕೇರಿ ನಗರದ ಪತ್ರಿಕಾ ಭವನದ ಪಕ್ಕದಲ್ಲಿ ನಗರಸಭೆಯ ವತಿಯಿಂದ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಮೂರು ನಾಲ್ಕು ವರ್ಷ ಕಳೆದರೂ ಇದುವರೆಗೆ ಉದ್ಘಾಟನೆಯಾಗದೆ ಹಾಗೆ ಇದೆ. ಈ ಶೌಚಾಲಯವೂ ಉದ್ಘಾಟನೆಗೆ ಯಾರಿಗಾಗಿ ಕಾದಿರುವುದೋ...? ಇಲ್ಲ ಇದೇ ರೀತಿ ಬೀಗ ಜಡಿದುಕೊಂಡು ಯಥಾಪ್ರಕಾರ ಮುಂದುವರೆಯುವುದೇ...? ಇದಕ್ಕೆ ಸಂಬಂಧಪಟ್ಟ ನಗರಸಭೆ ಯಾಕೆ ಜಾಣ ಮೌನವನ್ನು ಪ್ರದರ್ಶನ ಮಾಡುತ್ತಿದೆ ಆದಷ್ಟು ಬೇಗ ನಗರಸಭೆ ಅಧಿಕಾರಿಗಳು ಹಾಗೂ ನಗರಸಭೆಯ ಜನಪ್ರತಿನಿಧಿಗಳು ಈ ಸಾರ್ವಜನಿಕ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡುವಂತೆ ಕರ್ನಾಟಕ ರಕ್ಷಣಾವೇದಿಕೆ ಸಾರ್ವಜನಿಕರ ಪರವಾಗಿ ಒತ್ತಾಯ ಮಾಡುತ್ತದೆ.