Publish Date: Sat, 07 May 2022 (19:49 IST)
Updated Date: Sat, 07 May 2022 (19:53 IST)
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲೂ ಟೂತ್ ಕಿಂಗ್ ಪಿನ್ R.D ಪಾಟೀಲ್ ಅಕೌಂಟ್ ಫ್ರೀಜ್ ಮಾಡಿ ಸಿಐಡಿ ಶಾಕ್ ನೀಡಿದೆ. ಪಾಟೀಲ್ನ ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಈತ ಅಕ್ರಮದ ಮೂಲಕವೇ ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಲಾಗಿತ್ತಾ ಎಂಬ ಅನುಮಾನಗಳು ಮೂಡಿವೆ. ನಂಬಿಕಸ್ಥರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿರೋ ಶಂಕೆ ವ್ಯಕ್ತವಾಗ್ತಿದೆ. ಅಕ್ರಮದ ಮೂಲಕವೇ ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಲಾಗಿತ್ತ ಎಂಬ ಅನುಮಾನ ಬಲವಾದ ಕಾರಣ ಹಿನ್ನೆಲೆ ಕಿಂಗ್ ಪಿನ್ ಅಕೌಂಟ್ ಫ್ರೀಜ್ ಮಾಡಲಾಗಿದೆ.