Publish Date: Fri, 01 Nov 2019 (11:16 IST)
Updated Date: Fri, 01 Nov 2019 (11:19 IST)
ಕಲಬುರಗಿ : ಇಂದು ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಎಲ್ಲಾ ಕಡೆ ಕನ್ನಡಿಗರು ಸಂಭ್ರಮದಿಂದ ನಾಡಹಬ್ಬವನ್ನು ಆಚರಿಸಿದರೆ ಇನ್ನೊಂದು ಕಡೆ ಮತ್ತೆ ಪ್ರತ್ಯೇಕ ಕಲ್ಯಾಣ ಕರ್ನಾಟಕದ ಕೂಗು ಕೇಳಿಬಂದಿದೆ.
ರಾಜ್ಯೋತ್ಸವದ ದಿನದಂದು ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯವರು ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ರಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಲಬುರಗಿ ನಗರದಲ್ಲಿ ಹೋರಾಟ ಸಮಿತಿಯಿಂದ ಧರಣೆ ನಡೆಯುತ್ತಿದ್ದು, ಪ್ರತ್ಯೇಕ ಕಲ್ಯಾಣ ಕರ್ನಾಟಕಕ್ಕೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.