Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೂರೈಕೆಯಾಗದ ಕುಡಿಯುವ ನೀರು: ಅಧಿಕಾರಿಗಳನ್ನು ಪಂಚಾಯ್ತಿಯಲ್ಲೇ ಕೂಡಿಹಾಕಿದ ಗ್ರಾಮಸ್ಥರು

ಪೂರೈಕೆಯಾಗದ ಕುಡಿಯುವ ನೀರು: ಅಧಿಕಾರಿಗಳನ್ನು ಪಂಚಾಯ್ತಿಯಲ್ಲೇ ಕೂಡಿಹಾಕಿದ ಗ್ರಾಮಸ್ಥರು
ಗದಗ , ಸೋಮವಾರ, 6 ಆಗಸ್ಟ್ 2018 (18:29 IST)
ಕುಡಿಯುವ ನೀರು ಪೂರೈಕೆಯಾಗದ ಹಿನ್ನಲೆ ಗ್ರಾಮ ಪಂಚಾಯತ ಸದಸ್ಯರು ಹಾಗೂ ಅಧಿಕಾರಿಗಳನ್ನ ಕೂಡಿಹಾಕಿ ಬೀಗ ಜಡಿದು ಪ್ರತಿಭಟನೆಗೆ ಮುಂದಾಗಿರುವ ಘಟನೆ ನಡೆದಿದೆ.

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ಪಂಚಾಯತಿಗೆ ಮುತ್ತಿಗೆ ಹಾಕಿ ಕಚೇರಿ ಮುಂದೆ ಟಾಯರ್ ಸುಟ್ಟು ಪ್ರತಿಭಟನೆ ಮಾಡಿದರು. ಹನಿ ನೀರಿಗೂ ಹಾಹಾಕಾರ ಪಡುವಂತಹ ಪರಿಸ್ಥಿತಿ ಗ್ರಾಮದಲ್ಲಿ ಎದುರಾಗಿದೆ. ಊರ ಅಕ್ಕಪಕ್ಕ ತೋಟದಲ್ಲಿನ ಬಾವಿಗಳ ನೀರಿಗೆ ಅವಲಂಬಿತರಾಗಿದ್ದಾರೆ. ಮಹಿಳೆಯರು, ವೃದ್ಧರು, ಮಕ್ಕಳು ಸಾಕಷ್ಟು ನೀರಿಗಾಗಿ ಹರಸಾಹಸ ಪಡುವಂತಾಗಿದೆ.

ಇದರಿಂದ ರೋಸಿಹೋದ ಸಾರ್ವಜನಿಕರು ಗ್ರಾಮಪಂಚಾಯತ ಸದಸ್ಯರು ಹಾಗೂ ಅಧಿಕಾರಿಗಳನ್ನ ಕೊಠಡಿಯೊಳಗೆ ಕೂಡಿಹಾಕಿ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಡಿಸಿ, ತಹಶೀಲ್ದಾರ್ ಬರುವಂತೆ ಪಟ್ಟು ಹಿಡಿದರು. ಪಂಚಾಯತಿ ಮುಂದೆ ಗಾಂಧಿ ಫೋಟೋ ಜೊತೆ ಖಾಲಿ ಕೊಡಗಳೊಂದಿಗೆ ತಮ್ಮ ಆಕ್ರೋಶ ಹೊರಹಾಕಿದರು. ಗಂಭೀರ ಸಮಸ್ಯೆ ಬಗ್ಗೆ ಗಮನ ಹರಿಸದ ಅಧಿಕಾರಿಗಳು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.



 

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಮನ್ನಾ ಸಿಎಂ ಆದೇಶಕ್ಕೆ ಕಾಸಿನ ಕಿಮ್ಮತ್ತು ನೀಡದ ಬ್ಯಾಂಕ್ ಗಳು!