Publish Date: Mon, 20 Mar 2023 (13:45 IST)
Updated Date: Mon, 20 Mar 2023 (13:51 IST)
ಗುತ್ತಿಗೆ ಪದ್ದತಿಯನ್ನು ರದ್ದುಪಡಿಸಿ ನೇರಾ ಪಾವತಿಗೆ ತಂದು ಖಾಯಂಗೊಳಿಸಲು ಚಾಲಕರು.ಸಹಾಯಕರು.ಲೋಡರ್ ಗಳಿಂದ ಪ್ರತಿಭಟನೆ ಮಾಡಲಾಗಿದೆ.ಸರ್ಕಾರದ ಆದೇಶ ಇದ್ದರು ಸಹ ಮಾನ್ಯ ಮುಖ್ಯ ಪಾಲಿಕೆ ಆಯುಕ್ತರ ಮತ್ತು ಆಡಳಿತ ಅಧಿಕಾರಿಗಳಿಂದ ಮೀನಾಮೇಶ ಏಣಿಸುತ್ತಿರುವ ಹಿನ್ನೆಲೆ ಇಂದಿನಿಂದ ಅಟೋ ಟಿಪ್ಪರ್ ಲೋಡರ್ಸ್ ಸಹಾಯಕರಿಂದ ಕೆಲಸ ಸ್ಥಗಿತಗೊಳಿಸಲಾಗಿದೆ.ನಾಳೆಯಿಂದ ನಗರದ ಎಲ್ಲಾ ವಾರ್ಡ್ ಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಲು ಪಾಲಿಕೆಗೆ ಎಚ್ಚರಿಕೆ ಕೊಡಲಾಗಿದೆ.
ಚಾಲಕರು.ಸಹಾಯಕರು.ಲೋಡರ್ ಗಳು ಪಾಲಿಕೆಯಿಂದ ಫ್ರೀಡಂ ಪಾರ್ಕ್ ವರೆಗೂ ಕಾಲ್ನಡಿಗೆಯಲ್ಲಿ ಹೋಗಿ ಪ್ರತಿಭಟನೆ ಮಾಡಲಿದ್ದಾರೆ.ಗುತ್ತಿಗೆ ಪದ್ದತಿಯನ್ನು ತೊಲಗಿಸಿ ನೇರವಾಗಿ ನೇರಪಾವತಿ ಗೊಳಿಸಿ ಎಂದು ಪ್ರತಿಭಟನೆ ಮಾಡ್ತಿದ್ದಾರೆ.