ಸಿನಿಮಾ ಶೂಟಿಂಗ್ ನಲ್ಲಿ ಸ್ಫೋಟ ಪ್ರಕರಣ; ಟವರ್ ಏರಿದ ಮನೆಮಂದಿ

Webdunia
ಸೋಮವಾರ, 1 ಏಪ್ರಿಲ್ 2019 (19:22 IST)
ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರ ದುರ್ಮರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹ ಮಾಡಿ ಮೃತರ ಕುಟುಂಬದವರು ಟವರ್ ಏರಿದ ಘಟನೆ ನಡೆದಿದೆ.

ಮೊಬೈಲ್ ಟವರ್ ಏರಿ ಮೃತರ  ಕುಟುಂಬಸ್ಥರಿಂದ ಪ್ರತಿಭಟನೆ ನಡೆಯಿತು. ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿರುವ ಮೊಬೈಲ್ ಟವರ್ ಏರಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ರು. ಘಟನೆಯಲ್ಲಿ ಇಬ್ಬರು ಸಾವನ್ನಪಿದ್ರು ಸೌಜನ್ಯಕ್ಕೂ ಮೃತರ ಕುಟುಂಬಸ್ಥರನ್ನ ಭೇಟಿಯಾಗಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

ಸರ್ಕಾರ, ಚಿತ್ರತಂಡ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ನ್ಯಾಯ ಸಿಗೋವರೆಗೂ ಟವರ್ ನಿಂದ ಕೆಳಗಿಳಿಯಲ್ಲ ಅಂತ ಪಟ್ಟು ಹಿಡಿದರು.

ಶುಕ್ರವಾರ ಬಾಗಲೂರು ಹೊರವಲಯದ ಹಾರ್ಡ್ವೇರ್ ಪಾರ್ಕ್ನಲ್ಲಿ ಶೂಟಿಂಗ್ ವೇಳೆ ಮೃತ ಪಟ್ಟಿದ್ದರು ತಾಯಿ ಮಗು. ಘಟನೆ ನಡೆದು ಮೂರು ದಿನಗಳಾದ್ರು ನ್ಯಾಯ ಕೊಡ್ತಿಲ್ಲ ಅಂತ ಆಕ್ರೋಶ ವ್ಯಕ್ತವಾಗುತ್ತಿದೆ. ಚಿತ್ರತಂಡದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿರುವುದಾಗಿ ಮೃತರ ಕುಟುಂಬದವರು ದೂರಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಪ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಮಾಗಡಿ ಬಾಲಕೃಷ್ಣ ಒಂಟಿ ಕಣ್ಣಲ್ಲಿ ನೀರು ಹಾಕ್ತಿದ್ದಾರೆ: ಆರ್ ಅಶೋಕ್

ಗಿರೀಶ್ ಮಟ್ಟಣ್ಣನವರ್ ವಿರುದ್ಧ ದೂರು ಕೊಟ್ಟ ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ಮಹತ್ವದ ಬೆಳವಣಿಗೆ

ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ ಪೋಸ್ಟ್

Video: ವಿಶಾಖಪಟ್ಟಣಂನಲ್ಲಿ ಕಾಲೇಜು ಹುಡುಗಿಯರ ಚುಡಾಯಿಸಿದ್ದಕ್ಕೆ ರಸ್ತೆಯಲ್ಲೇ ಕಾಲಿಗೆ ಹೊಡೆದ ಪೊಲೀಸರು: ಈ ಕ್ರಮ ಸರಿನಾ

ಪ್ರೀತಿಯಿಂದ ನೀಡಿರುವ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಡಿಕೆ ಶಿವಕುಮಾರ್ ಪುನರುಚ್ಚಾರ

ಮುಂದಿನ ಸುದ್ದಿ
Show comments