Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪ್ರಾಣಿಗಳು ಕೆಲವೊಮ್ಮೆ ಅಪಾಯಕ್ಕೆ ಸಿಲುಕುತ್ತವೆ. ಈ ಸಮಯದಲ್ಲಿ ಅವುಗಳನ್ನು ಕಾಪಾಡುವುದು ಅಷ್ಟು ಸುಲಭವಲ್ಲ. ಆದರೂ ಕೆಲವೊಮ್ಮೆ ಪ್ರಾಣಿಗಳನ್ನು ಮನುಷ್ಯರು ರಕ್ಷಿಸಲು ಮುಂದಾಗುತ್ತಾರೆ. ಇದೀಗ ಅಂತದ್ದೇ ವಿಡಿಯೋವೊಂದು ವೈರಲ್ ಆಗಿದೆ. ಜಿಂಕೆಯ ಮೈಮೇಲೆ ಹಿಮ ಹೆಪ್ಪುಗಟ್ಟಿದೆ. ಅದನ್ನು ನೋಡಿದ ಪ್ರವಾಸಿಗರು ರಕ್ಷಿಸಿದ್ದಾರೆ.. ಹೌದು, ಹಿಮಪಾತದಲ್ಲಿ ಜಿಂಕೆಯೊಂದು ಸಂಕಷ್ಟಕ್ಕೆ ಸಿಲುಕಿದೆ. ಜಿಂಕೆಯ ಮೈತುಂಬ ಹಿಮ ಹೆಪ್ಪುಗಟ್ಟಿದೆ. ಕಿವಿ, ಮೂಗು, ಬಾಯಿ ಹೀಗೆ ಹೆಪ್ಪುಗಟ್ಟಿದ್ದು, ಜಿಂಕೆ ಉರಿರಾಡಲು ಕಷ್ಟಪಡುತ್ತಿದೆ. ಇದನ್ನ ನೋಡಿದ ಪ್ರವಾಸಿಗರು ವಾಹನವನ್ನು ನಿಲ್ಲಿಸಿ, ಜಿಂಕೆಯ ಮೈಮೇಲೆ ಹೆಪ್ಪುಗಟ್ಟಿದ್ದ ಹಿಮವನ್ನು ಬಿಡಿಸಿದ್ದಾರೆ.