Publish Date: Sun, 15 Oct 2017 (15:02 IST)
Updated Date: Sun, 15 Oct 2017 (15:05 IST)
ಮಂಗಳೂರು: ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಂಗಲ್ಪಾಡಿಯ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಿಂಪ್ ಗಳು ಸೇರಿದಂತೆ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪಿಂಪ್ ಗಳಾದ ಸಂತೋಷ್ ಕುಮಾರ್(32), ಆಶಾ ಜಿ(23), ದೀಪಕ್(26), ನವೀನ್(40) ಬಂಧಿತರು. ಬಂಧಿತರ ಬಳಿ 31,500 ರೂ. ನಗದು, 7 ಮೊಬೈಲ್ ಫೋನ್, 2 ಬೈಕ್ ಸೇರಿದಂತೆ 2,06,100 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಶಾ ಎಂಬಾಕೆ ಅಪಾರ್ಟ್ ಮೆಂಟ್ ನ್ನು ಬಾಡಿಗೆಗೆ ಪಡೆದು ಯುವತಿಯರನ್ನು ಈ ಫ್ಲಾಟ್ ನಲ್ಲಿ ಇಟ್ಟುಕೊಂಡು ಸಂತೊಷ್ ಎಂಬಾತನ ಸಹಾಯದೊಂದಿಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಇಬ್ಬರು ನೊಂದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.