ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟ: ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಅಪೋಲೋ ಆಸ್ಪತ್ರೆಯು ಮಾರಣಾಂತಿಕ ಕ್ಯಾನ್ಸರ್ ರೋಗ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೈದ್ಯಕೀಯ ಉಪಕರಣವನ್ನು ಅಳವಡಿಸಿಕೊಂಡಿದೆ. ದೇಶದ ಮೊದಲ ಬಾರಿಗೆ ಶೇಷಾದ್ರಿಪುರಂನಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಶೇ.97ರಷ್ಟು ಕ್ಯಾನ್ಸರ್ ರೋಗದ ನಿಖರತೆ ಪತ್ತೆಹಚ್ಚುವಲ್ಲಿ ಎಂಆರ್ಐ ಪ್ಯೂಷನ್ ಬಯಾಪ್ಪಿ ತಂತ್ರಜ್ಞಾನವನ್ನು ಸ್ಥಾಪಿಸಲಾಗಿದೆ.ಹೊಸ ತಂತ್ರಜ್ಞಾನ ಬಗ್ಗೆ ಡಾ.ಟಿ.ಮನೋಹರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿದೆ. ಪುರುಷರಲ್ಲಿ ಒಟ್ಟು ಕ್ಯಾಪ್ಟರ್ಗಳಲ್ಲಿ ಶೇ.71ರಷ್ಟಿದೆ. ಆರಂಭಿಕ ರೋಗ ನಿರ್ಣಯವು ಫಲಿತಾಂಶಗಳನ್ನು ಸುಧಾರಿಸುವಲ್ಲಿ ನಿರ್ಣಾಯಕವಾಗಿದೆ. ರೋಗ ನಿರ್ಣಯದಲ್ಲಿ ವಿಳಂಬವು ಕ್ಯಾನ್ಸರ್ ಅನ್ನು ಮುಂದುವರಿದ ಹಂತಕ್ಕೆ ತಲುಪಬಹುದು, ಐದು ವರ್ಷಗಳ ಬದುಕುಳಿಯುವಿಕೆಯ ಪ್ರಮಾಣವು ಗಮನಾರ್ಹವಾಗಿ ಶೇ.30ಕ್ಕೆ ಇಳಿಯುತ್ತದೆ. ವಿವಿಧ ಪರೀಕ್ಷಾ ವಿಧಾನಗಳು ಶೇ.35-45ರಷ್ಟು ರೋಗ ನಿರ್ಣಯ ತಪ್ಪಿಸಲಿದೆ. ಪ್ರಸ್ತುತ ಬಯಾಸ್ಸಿ ವಿಧಾನವು ಟ್ರಾನ್ಸ್-ರೆಕ್ಟಲ್ ಮಾರ್ಗದ ಮೂಲಕ ಮಾಡಲ್ಪಟ್ಟಿದೆ. ಹಲವಾರು ಸೋಂಕುಗಳಿಗೆ ಕಾರಣವಾಗಬಹುದು, ಇದು ಇನ್ನೂ ಶೇ.25ರಷ್ಟು ರೋಗನಿರ್ಣಯವನ್ನು ತಪ್ಪಿಸಲಿದೆ ಎಂದರು.