Publish Date: Fri, 28 Nov 2025 (10:36 IST)
Updated Date: Fri, 28 Nov 2025 (10:39 IST)
ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಸಚಿವ ಪ್ರಿಯಾಂಕ್ ಖರ್ಗೆ ಹೈಕಮಾಂಡ್ ಮೀಟಿಂಗ್ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ವಿಚಾರ ಮೂರು ದಿನದಲ್ಲಿ ಹೈಕಮಾಂಡ್ ತೀರ್ಮಾನಿಸಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ನಾಳೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿ ಸಂಧಾನ ಮಾತುಕತೆ ನಡೆಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ.
ಆದರೆ ಯಾವುದೂ ಅಧಿಕೃತವಲ್ಲ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹೈಕಮಾಂಡ್ ನಿಂದ ಸಭೆ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಏನೇ ಇದ್ದರೂ ಖರ್ಗೆ ಸಾಹೇಬ್ರು ಹೇಳ್ತಾರೆ. ಅವರು ಕರೆದರೆ ಮಾತ್ರ ನಾವೆಲ್ಲಾ ಹೋಗಬೇಕು. ಹಲವು ವರ್ಷಗಳಿಂದಲೂ ಇದೇ ನಡೆದುಕೊಂಡು ಬರುತ್ತಿದೆ. ಹೈಕಮಾಂಡ್ ಗೆ ಸಮಯ ಪ್ರಜ್ಞೆಯಿದೆ ಎಂದಿದ್ದಾರೆ.
ಇನ್ನೊಂದು ಮೂಲಗಳ ಪ್ರಕಾರ ಪ್ರಿಯಾಂಕ್ ಖರ್ಗೆ ಮೂಲಕ ಡಿಕೆ ಶಿವಕುಮಾರ್ ಗೆ ಮೂರು ದಿನದಲ್ಲಿ ಹೈಕಮಾಂಡ್ ನಿಂದ ಮಾತುಕತೆಗೆ ಬುಲಾವ್ ಬರಲಿದೆ ಎಂಬ ಸಂದೇಶ ರವಾನೆಯಾಗಿದೆ ಎಂದೂ ಹೇಳಲಾಗುತ್ತಿದೆ.
Krishnaveni K
Publish Date: Fri, 28 Nov 2025 (10:36 IST)
Updated Date: Fri, 28 Nov 2025 (10:39 IST)