Publish Date: Mon, 06 Jul 2026 (12:11 IST)
Updated Date: Mon, 06 Jul 2026 (12:14 IST)
ಬೆಂಗಳೂರು: ಆರ್ ಎಸ್ಎಸ್ ಸಂಘಟನೆಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ನಾನು ಯಾವುದಕ್ಕೂ ಹೆದರಲ್ಲ ಎಂದು ಸಂದೇಶ ರವಾನಿಸಿದ್ದಾರೆ.
ರಾಜ್ಯದಲ್ಲಿ ಇನ್ನು ಮುಂದೆ ಆರ್ ಎಸ್ಎಸ್ ಪಥಸಂಚಲನ ಮಾಡಬೇಕಾದರೆ ಅನುಮತಿ ಕಡ್ಡಾಯ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದರೊಂದಿಗೆ ಆರ್ ಎಸ್ಎಸ್ ಮತ್ತು ಸಚಿವರ ನಡುವಿನ ತಿಕ್ಕಾಟ ತಾರಕಕ್ಕೇರಿದೆ.
ನಾಳೆ ಯಾರೋ ಯಾವುದೋ ಧ್ವಜದ ಅಡಿಯಲ್ಲಿ ಸಂಘಟನೆ ಮಾಡಿ ಚಂದಾ ಕಲೆಕ್ಟ್ ಮಾಡಬಹುದು. ಹಾಗಂತ ಇಡಿ ಇಲಾಖೆಯವರು ಸುಮ್ಮನೇ ಕೂರುತ್ತಾರಾ? ಆರ್ ಎಸ್ಎಸ್ ನವರು ಪಥಸಂಚಲನ ಮಾಡಬೇಕಾದರೆ ಅನುಮತಿ ಪಡೆಯಬೇಕು. ಈ ಬಗ್ಗೆ ಈಗಷ್ಟೇ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.
ಇತ್ತೀಚೆಗೆ ಆರ್ ಎಸ್ಎಸ್ ಸಂಘಟನೆ ನೋಂದಣಿ ಮಾಡಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು. ಇದರ ಬಗ್ಗೆ ಮಾತನಾಡಿರುವ ಅವರು 100 ವರ್ಷ ಹಳೆಯ ಸಂಘಟನೆ ಅಲ್ವಾ? ಬಹುಶಃ ಕಾಗದ ಪತ್ರಗಳನ್ನು ಹುಡುಕುತ್ತಿರಬೇಕು. ಹುಡುಕಲಿ. ಇದರ ನಡುವೆ ನನ್ನ ವೈಯಕ್ತಿಕ ಮಾಹಿತಿ ಕೆದಕುತ್ತಿದ್ದಾರೆ. ನನ್ನ ಕುಟುಂಬ, ನಾನು ಕಪ್ಪಗಿದ್ದೀನಾ, ಬೆಳ್ಳಗಿದ್ದೀನಾ ಎಂದೆಲ್ಲಾ.. ಇದಕ್ಕೆಲ್ಲಾ ನಾನು ಹೆದರುವವನಲ್ಲ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ