Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಶಿವಮೊಗ್ಗ : ಖೈದಿಯೊಬ್ಬನು ಗ್ರಂಥಾಲಯದ ಕಬ್ಬಿಣದ ರ್ಯಾಕ್‍ಗೆ ಅಳವಡಿಸಿದ ಗಾಜಿನಿಂದ ಕುತ್ತಿಗೆ ಕೊಯ್ದುಕೊಂಡ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ತೀರ್ಥಹಳ್ಳಿ ಮೂಲದ ಮಹಮ್ಮದ್ ನೌಷದ್ (34) ಕುತ್ತಿಗೆ ಕೊಯ್ದುಕೊಂಡ ಖೈದಿ. ಗಾಂಜಾ ಪ್ರಕರಣದಲ್ಲಿ ಜ.7ರಂದು ಬಂಧನಕ್ಕೆ ಒಳಗಾಗಿದ್ದ.
ಗಾಂಜಾ ಹಾಗೂ ಮದ್ಯ ವ್ಯಸನಿಯಾಗಿದ್ದ ನೌಷದ್‍ನನ್ನು ನೋಡಲು ಕಾರಾಗೃಹಕ್ಕೆ ಯಾರೂ ಬರುತ್ತಿರಲಿಲ್ಲ.
ಜಾಮೀನು ಕೊಡಿಸುತ್ತಿಲ್ಲ ಅಂತ ಮನನೊಂದಿದ್ದ. ಗಾಯಗೊಂಡ ಖೈದಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.