Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉತ್ತರಾಯಣದ ಶುಭಕೋರಿದ ಪ್ರಧಾನಿ ಮೋದಿ!

narendra

geetha

bangalore , ಭಾನುವಾರ, 14 ಜನವರಿ 2024 (18:42 IST)
ನವದೆಹಲಿ : ಈ ಪವಿತ್ರ ಸಂದರ್ಭವು ಎಲ್ಲರ ಬಾಳಿನಲ್ಲಿ ಹೊಸ ಅವಕಾಶಗಳನ್ನು ತೆರೆಯಲಿ. ಹೊಸ ಸಾಧ್ಯತೆಗಳನ್ನು ವಿಸ್ತರಿಸಲಿ. ನಿಮ್ಮೆಲ್ಲರ ಆಕಾಂಕ್ಷೆಗಳೂ ಸಹ ಈಡೇರಲಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಹಾರೈಸಿದ್ದಾರೆ.  

ಭೂಮಿಯು ಸೂರ್ಯನ ಸುತ್ತ ಹಾಕುವ ಪ್ರದಕ್ಷಿಣೆಗೆ 365 ದಿನಗಳ ಸಮಯ ಬೇಕು. ಅದರಲ್ಲಿ ಮೊದಲ ಅರ್ಧ ಉತ್ತರದಿಂದ ದಕ್ಷಿಣಕ್ಕೆ ಚಲಿಸಿದರೆ, ದ್ವಿತೀಯಾರ್ಧದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತದೆ. ಇದನ್ನೇ  ಸಂಕ್ರಾಂತಿ ವೃತ್ತ ಎಂದು ಕರೆಯುತ್ತಾರೆ. ಭಾರತಾದ್ಯಂತ ಈ ಘಳಿಗೆಯನ್ನು ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ. ದಕ್ಷಿಣ ಭಾರತೀಯರಿಗೆ ಇದು ಸುಗ್ಗಿ ಹಬ್ಬವಾಗಿದೆ. 

ಸೌರಮಾನ ವ್ಯವಸ್ಥೆಯ ಪ್ರಕಾರ ಸೂರ್ಯನ ಚಲನೆಯನ್ನಾಧರಿಸಿ ಅಳೆಯುವ ಕಾಲಮಾನದಂತೆ ಇಂದಿನಿಂದ ಉತ್ತರಾಯಣ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್‌ ಖಾತೆಯ ಮೂಲಕ ಉತ್ತರಾಯಣದ ಶುಭಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್‌ ಸವಾರನ ನಿರ್ಲಕ್ಷ್ಯಕ್ಕೆ ಆಟೋ ಪಲ್ಟಿ