ನವದಿಲ್ಲಿ :ನೇಪಾಳದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಕರ್ನಾಟಕ ರಾಜ್ಯ ಚುನಾವಣೆಯ ದಿನವಾದ ಇಂದು ಅಲ್ಲಿನ ಮುಕ್ತಿಧಾಮ ಮತ್ತು ಪಶುಪತಿನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದಕ್ಕೆ ರಾಜಸ್ಥಾನ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರು,’ ಕರ್ನಾಟಕ ಮತದಾರರನ್ನು ಸೆಳೆಯುವ ಉದ್ದೇಶದಿಂದಲೇ ಪ್ರಧಾನಿ ಮೋದಿ ನೇಪಾಳದಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಕರ್ನಾಟಕದಲ್ಲಿ ಈಗ ನೀತಿ ಸಂಹಿತೆಯಿದೆ. ಈ ಕಾರಣಕ್ಕೆ ಮತದಾರರನ್ನು ಸೆಳೆಯಲು ಮೋದಿ ಚುನಾವಣೆಯ ದಿನದಂದೇ ನೇಪಾಳದಲ್ಲಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಮೋದಿ ದೇವಾಲಯಕ್ಕೆ ಭೇಟಿ ನೀಡಿರುವುದು ಪ್ರಜಾಪ್ರಭುತ್ವದ ಉದ್ದೇಶದಿಂದ ಒಳ್ಳೆಯದಲ್ಲ. ದೇವಾಲಯಕ್ಕೆ ಬೇರೆ ದಿನ ಭೇಟಿ ನೀಡಬಹುದಿತ್ತು. ಚುನಾವಣೆಯ ದಿನವೇ ಈ ಸ್ಥಳಕ್ಕೆ ಭೇಟಿ ನೀಡುವ ದಿನವನ್ನು ನಿಗದಿ ಪಡಿಸಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ