ಸ್ವತಂತ್ರ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.ರಾಜ್ಯ ಮಟ್ಟದ ಸಮಾರಂಭ ನಡೆಸ್ತಿರೋ ಹಿನ್ನೆಲೆ ಪ್ರತಿ ವರ್ಷದಂತೆ 9ಗಂಟೆಗೆ ಮುಖ್ಯಮಂತ್ರಿಗಳಿಂದ ದ್ವಜಾರೋಹಣ ಆಗುತ್ತೆ.ಸಾರ್ವಜನಿಕರಿಗೂ ನೋಡೋಕೆ ಅವಕಾಶ ಇರುತ್ತೆ.ಪೆರೆಡ್ ಆದ್ಮೇಲೆ ಏಳು ಕಾರ್ಯಕ್ರಮಗಳು ಇರುತ್ತೆ.ಒಂದೂವರೆ ಸಾವಿರ ಜನ ಶಾಲಾ ಮಕ್ಕಳಿಂದ ಒಂದು ಕಾರ್ಯಕ್ರಮ ಇರುತ್ತೆ.ಪೊಲೀಸ್ ಇಲಾಖೆ, ಸೇರಿ 37ತುಕಡಿಗಳು ಪೆರೆಡ್ ನಲ್ಲಿ ಭಾಗವಹಿಸ್ತಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ದಿನ ವಾಹನ ನಿಲುಗಡೆ ನಿಷಿದ್ಧ
ಯಾವ್ಯಾವ ರಸ್ತೆಯಲ್ಲಿ ನಿರ್ಬಂಧ?
-ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ
-ಕಬ್ಬನ್ ರಸ್ತೆ, ಸಿ.ಟಿ.ಓ ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ ವರೆಗೆ
-ಎಂ.ಜಿ.ರಸ್ತೆ,ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ