Publish Date: Wed, 13 Apr 2022 (20:41 IST)
Updated Date: Wed, 13 Apr 2022 (20:47 IST)
ಸ್ಯಾಂಡಲ್ವುಡ್ ಲವ್ಲಿ ಸ್ಟಾರ್ ಪ್ರೇಮ್ `ಪ್ರೇಮಂ ಪೂಜ್ಯಂ ಚಿತ್ರದ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಸಿನಿಮಾದಲ್ಲಿ ಭಿನ್ನ ಪಾತ್ರದ ಮೂಲಕ ರಂಜಿಸಲು ಅವರು ಸಜ್ಜಾಗಿದ್ದು, ಈ ಹೊಸ ಚಿತ್ರಕ್ಕೆ ಡೈರೆಕ್ಟರ್ ಗುರು ಸಾವನ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.ಪ್ರೇಮಂ ಪೂಜ್ಯಂ ಸೂಪರ್ ಸಕ್ಸಸ್ ನಂತರ ಡಿಫರೆಂಟ್ ಗೆಟಪ್ನಲ್ಲಿ ರಂಜಿಸಲು ಲವ್ಲಿ ಸ್ಟಾರ್ ಪ್ರೇಮ್ ಸಜ್ಜಾಗಿದ್ದು, ಮನೆಗಳಿಗೆ ಹೋಗಿ ಪೋಸ್ಟ್ ತಲುಪಿಸುವ ಪೋಸ್ಟ್ಮ್ಯಾನ್ ಪಾತ್ರದಲ್ಲಿ ನಟ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ..ಈಗಿಂದಲೇ ಭರ್ಜರಿ ತಯಾರಿ ನಡೆಸಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಅಮೆರಿಕಾ ಅಮೆರಿಕಾ ಖ್ಯಾತಿಯ ಅಕ್ಷಯ್ ಆನಂದ್ ನಟಿಸಿಲಿದ್ದಾರೆ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಗಾಯಕಿ ಅನನ್ಯಾ ಭಟ್ ಡಿಫರೆಂಟ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
geetha
Publish Date: Wed, 13 Apr 2022 (20:41 IST)
Updated Date: Wed, 13 Apr 2022 (20:47 IST)