Publish Date: Wed, 27 Dec 2017 (10:43 IST)
Updated Date: Wed, 27 Dec 2017 (10:45 IST)
ಬೆಂಗಳೂರು: ಮಹದಾಯಿ ಹೋರಾಟಗಾರರಿಗೆ ಬಿಗ್ ಬಾಸ್ ವಿಜೇತ ಒಳ್ಳೆ ಹುಡುಗ ಪ್ರಥಮ್ ಸಾಥ್ ನೀಡಿದ್ದಾರೆ. ಪ್ರತಿಭಟನಾಕಾರರೊಂದಿಗೆ ಕೂತಿರುವ ಪ್ರಥಮ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಪ್ರಧಾನಿ ಮೋದಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಗೋವಾ ಸಿಎಂ ಪರಿಕ್ಕರ್ ಹಿಂದೆ ರಕ್ಷಣಾ ಸಚಿವರಾಗಿದ್ದವರು. ಅವರಿಗೆ ಇಡೀ ದೇಶದ ಸಮಸ್ಯೆ ಬಗ್ಗೆ ಅರಿವಿರುತ್ತದೆ’ ಎಂದರು.
ಅಷ್ಟೇ ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಾಮಾಣಿಕವಾಗಿ ಪರಿಹಾರ ಕೊಡಿಸುವ ಕೆಲಸ ಮಾಡಿದ್ದಾರೆ. ಆದರೆ ಇದಕ್ಕೆ ಈಗ ರಾಜಕೀಯ ಬಣ್ಣ ಬಳಿಯುತ್ತಿದೆ. ಆದರೆ ರಾಜಕೀಯ ರಂಗು ಕೊಡುವ ಕೆಲಸ ಮಾಡಬಾರದು. ಪ್ರಾಮಾಣಿಕವಾಗಿ ಎಲ್ಲರೂ ನೀರು ಸಮಸ್ಯೆಗೆ ಪರಿಹಾರ ಕೊಡುವ ಕೆಲಸ ಮಾಡಬೇಕು’ ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ