Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ತಾಕತ್ತಿದ್ದರೆ ಡಿಸಿಯನ್ನ ವರ್ಗಾವಣೆ ಮಾಡಿಸು ಎಂಬ ಜಿಟಿಡಿ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಅಧಿಕಾರಿ ಟ್ರಾನ್ಸ್ ಫರ್ ಮಾಡೋ ತಾಕತ್ ನನಗೆ ಬೇಡ. ನಾನು ಕೆಲಸ ಮಾಡಿ ತಾಕತ್ತು ತೋರಿಸಿದ್ದೇನೆ. ಮೈಸೂರಿಗೆ ನಾನು ಹೊರಗಿನವನು. ಆದ್ರೂ ಮೈಸೂರು-ಕೊಡಗು ಜನ ನನ್ನ ಗೆಲ್ಲಿಸಿದ್ರು. ನನ್ನ ತಾಕತ್ ತೋರಿಸಿ ಒಳ್ಳೆ ಕೆಲಸ ಮಾಡಿದ್ದೇನೆ. ಹಾಗಾಗಿ 2ನೇ ಬಾರಿಯೂ ಜನ ನನ್ನ ಗೆಲ್ಲಿಸಿದ್ದಾರೆ. 1.40 ಲಕ್ಷ ಮತಗಳ ಅಂತರದಲ್ಲಿ ಜನ ಗೆಲ್ಲಿಸಿದ್ರು. ಇದಕ್ಕಿಂತಲೂ ಯಾವ ತಾಕತ್ತು ತೋರಿಸಬೇಕು ಎಂದು ಹೇಳಿದ್ದಾರೆ.
ವರ್ಗಾವಣೆ ಮಾಡಿಸೋದು ರಾಜಕಾರಣಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಕೆಲಸ ನಾನು ಮಾಡೋದಿಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜತೆ ಕೆಲಸ ಮಾಡ್ತೇನೆ ಎಂದು ತಿಳಿಸಿದ್ದಾರೆ.