Select Your Language

Notifications

webdunia
webdunia
webdunia
webdunia

ಸಿದ್ಧರಾಮಯ್ಯನವರಿಗೆ ಮಗನನ್ನು ತೆಪ್ಪಗೆ ಮನೆಯಲ್ಲಿರು ಅನ್ನಕ್ಕಾಗಲ್ವಾ: ಪ್ರತಾಪ್ ಸಿಂಹ

Prathap Simha-Yathindra
ಮೈಸೂರು: ತಮಗೇ ಮುಜುಗರ ತಂದಿಡುವ ಮಗನನ್ನು ತೆಪ್ಪಗೆ ಮನೆಯಲ್ಲಿರು ಎಂದು ಸಿದ್ಧರಾಮಯ್ಯನವರಿಗೆ ಹೇಳಕ್ಕಾಗಲ್ವಾ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಪುತ್ರ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ಬಾಯಿ ಬಿಟ್ಟರೆ ಇನ್ನೊಬ್ಬರಿಗೆ ಏಕವಚನದಲ್ಲಿ ಮಾತನಾಡಿಸುತ್ತಾರೆ, ಆವಾಜ್ ಹಾಕುತ್ತಾರೆ. ಅವರಿಗೆ ಎಲ್ಲಾ ಕಡೆ ಮೂಗು ತೂರಿಸಿಕೊಂಡು ಒಂದು ರೀತಿಯಲ್ಲಿ ತಮಗೇ ಮುಜುಗರ ಉಂಟು ಮಾಡುತ್ತಿರುವ ಮಗನನ್ನು ನೀನೇನೂ ಮಾಡಬೇಡಪ್ಪ, ತೆಪ್ಪಗೆ ಮನೆಯಲ್ಲಿರು ಎಂದು ಹೇಳಲು ಆಗಲ್ವಾ?
 
ಏನ್ರೀ ಆ ಯತೀಂದ್ರ ದುರಾಸೆ? ತಂದೆ ಹೆಸರಿನಲ್ಲಿ ಇದ್ದ ಅಧಿಕಾರಿಗಳನ್ನೆಲ್ಲಾ ವರ್ಗಾವಣೆ ಮಾಡಿ ಕಮಿಷನ್ ಹೊಡೆಯೋದು. ಇಂಥಾ ದುರಾಸೆ ಸಿದ್ದರಾಮಯ್ಯನವರಲ್ಲೂ ನೋಡಿಲ್ಲ. ಮುಡಾ ಸೈಟು ಹೊಡೆದಿದ್ದೂ ಇದೇ ಯತೀಂದ್ರ ದುರಾಸೆಯಿಂದ. ಮಗನಿಂದ ತಮ್ಮ ಹೆಸರಿಗೆ ಕಳಂಕ ಬಂದರೂ ಸುಮ್ಮನಿದ್ದಾರಲ್ಲಾ ಅವರು.
 
ಇದಕ್ಕೆ ಹೋದಲ್ಲೆಲ್ಲ ಐದು ವರ್ಷವೂ ನಮ್ಮಪ್ಪನೇ ಮುಖ್ಯ ಮಂತ್ರಿ ಎಂದು ಹೇಳಿಕೊಂಡು ತಿರುಗಾಡ್ತಿದಾರೆ. ಮೈಸೂರಿನ ಅಭಿವೃದ್ಧಿಗೆ ಅವರ ಕೊಡುಗೆ ಏನಿದೆ. ಅವರು ಒಂದು ವೈದ್ಯ ಪದವಿ ಹೊಂದಿದ್ದರೂ ಇಲ್ಲಿನ ಕೆಆರ್ ಆಸ್ಪತ್ರೆ ಅಭಿವೃದ್ಧಿಯಾಗಿಲ್ಲ' ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ