Publish Date: Tue, 10 Jun 2025 (15:13 IST)
Updated Date: Tue, 10 Jun 2025 (15:16 IST)
ಬೆಂಗಳೂರು: ಮೋದಿ ಎಲ್ಲಿ ಪ್ರಚಾರ ಸಿಗುತ್ತೋ ಅಲ್ಲಿ ಮಾತ್ರ ಹೋಗ್ತಾರೆ, ಮಣಿಪುರಕ್ಕೆ ಇದೇ ಕಾರಣಕ್ಕೆ ಹೋಗ್ತಿಲ್ಲ ಎಂಬ ವಿಪಕ್ಷಗಳ ಆರೋಪಗಳಿಗೆ ಏನು ಹೇಳ್ತೀರಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಮಾಧ್ಯಮಗಳು ಪ್ರಶ್ನಿಸಿದ್ದು ಅದಕ್ಕೆ ಅವರ ಉತ್ತರ ಏನಿತ್ತು ನೋಡಿ.
ಮಣಿಪುರದಲ್ಲಿ ಸಾಕಷ್ಟು ಹಿಂಸಾಚಾರಗಳು ಆಗುತ್ತಲೇ ಇರುತ್ತವೆ. ಆದರೆ ಮೋದಿ ಇದುವರೆಗೆ ಭೇಟಿ ನೀಡಿಲ್ಲ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಪಹಲ್ಗಾಮ್ ಗೂ ಮೋದಿ ಭೇಟಿ ನೀಡಿಲ್ಲ. ಹೀಗಾಗಿ ಪ್ರಚಾರ ಸಿಗುವಲ್ಲಿ ಮಾತ್ರ ಮೋದಿ ಹೋಗ್ತಾರೆ ಎಂಬ ಆರೋಪದ ಬಗ್ಗೆ ಏನು ಹೇಳ್ತೀರಿ ಎಂದು ಪ್ರಲ್ಹಾದ್ ಜೋಶಿಗೆ ಪ್ರಶ್ನೆ ಕೇಳಲಾಯಿತು.
ಇದಕ್ಕೆ ಉತ್ತರಿಸಿದ ಅವರು ಇಡೀ ದೇಶದಲ್ಲಿ ಮೋದಿ ಪ್ರಧಾನಿ ಮಂತ್ರಿಯಾಗಿ ಎಷ್ಟು ಹೋಗಿದ್ದಾರೋ ಯಾವ ಪ್ರಧಾನಿಯೂ ಹೋಗಿಲ್ಲ. ಎಲ್ಲಿಗೆ ಯಾವಾಗ ಹೋಗಬೇಕು ಎಂಬ ಬಗ್ಗೆ ಒಂದು ಸ್ಟ್ರಾಟಜಿಕಲ್ ವ್ಯವಸ್ಥೆಯಿರುತ್ತದೆ. ಸರ್ಕಾರದ ಮಟ್ಟದಲ್ಲಿ ಏನೆಲ್ಲಾ ಮಾಡಬೇಕು ಅದನ್ನು ಮಾಡ್ತೀವಿ ನಾವು. ಮಣಿಪುರದಲ್ಲಿ ಏನು ಆಗ್ತಿದೆಯೋ ಅದು ದೌರ್ಭಾಗ್ಯ. ಪ್ರತಿ ಜೀವಕ್ಕೂ ಬೆಲೆಯಿದೆ.
ಈ ಹಿಂದೆ ಆಗಿದ್ದಾಗ ಯಾರು ಎಷ್ಟು ಹೋಗಿದ್ದರು ಎಲ್ಲಾ ನಾವು ನೋಡಿದ್ದೆವು. ಈ ಹಿಂದೆ ಪ್ರಧಾನ ಮಂತ್ರಿ ಬಿಡಿ, ಗೃಹಮಂತ್ರಿಯೂ ಹೋಗ್ತಿರಲಿಲ್ಲ ಎಂದು ಪ್ರಲ್ಹಾದ್ ಜೋಶಿ ಪ್ರತ್ಯುತ್ತರ ನೀಡಿದ್ದಾರೆ.
Krishnaveni K
Publish Date: Tue, 10 Jun 2025 (15:13 IST)
Updated Date: Tue, 10 Jun 2025 (15:16 IST)