Publish Date: Mon, 19 Feb 2018 (10:24 IST)
Updated Date: Mon, 19 Feb 2018 (10:26 IST)
ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪ್ಪಾಡ್ ಗೂಂಡಾ ವರ್ತನೆ ಬಗ್ಗೆ ವರದಿಯಾಗುತ್ತಿದ್ದಂತೆ ಕಾರ್ಯಕ್ರಮವೊಂದರಲ್ಲಿ ನಟ ಪ್ರಕಾಶ್ ಈ ಹಿಂದೆ ಆತನನ್ನು ಹೊಗಳಿದ್ದ ವಿಡಿಯೋ ಪ್ರಸಾರವಾಗಿತ್ತು.
ಕಾರ್ಯಕ್ರಮವೊಂದರಲ್ಲಿ ಪ್ರಕಾಶ್ ರೈ ವೇದಿಕೆಯಲ್ಲಿ ನಲಪ್ಪಾಡ್ ಹತ್ತಿರ ಕರೆಸಿಕೊಂಡು ಆತನ ಹೆಗಲಿಗೆ ಕೈ ಹಾಕಿಕೊಂಡು ಹುಟ್ಟಿದರೆ ಇಂತಹಾ ಮಗ ಹುಟ್ಟಬೇಕು. ಈ ರೀತಿ ಮಕ್ಕಳನ್ನು ಬೆಳೆಸಬೇಕು ಎಂದು ಕೊಂಡಾಡಿದ್ದರು.
ಈ ವಿಡಿಯೋ ಬಿಜೆಪಿ ಟೀಕೆಗೆ ಆಹಾರವಾಗಿತ್ತು. ಇದರ ಬೆನ್ನಲ್ಲೇ ಇದೀಗ ವಿವಾದದ ಬಗ್ಗೆ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದು, ತಮ್ಮ ಟ್ವಿಟರ್ ಪೇಜ್ ನಲ್ಲಿ ‘ಈ ಹೀನ ಕೃತ್ಯವನ್ನು ನಾನು ಖಂಡಿಸುತ್ತೇನೆ. ತಪ್ಪು ಯಾರೇ ಮಾಡಿದರೂ ತಪ್ಪೇ. ಆತನಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ