Webdunia - Bharat's app for daily news and videos

Install App

ತಾನು ಹೇಳಿದ ಒಳ ಉಡುಪನ್ನೇ ಧರಿಸಬೇಕು ಎನ್ನುತ್ತಿದ್ದ ಪ್ರಜ್ವಲ್ ರೇವಣ್ಣ: 3 ನೇ ಸಂತ್ರಸ್ತೆಯ ವಿವರ ಇಲ್ಲಿದೆ

Krishnaveni K
ಶನಿವಾರ, 14 ಸೆಪ್ಟಂಬರ್ 2024 (08:51 IST)
ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಪ್ರಕರಣದಲ್ಲಿ ಎಸ್ ಐಟಿ ತಂಡ ಮೂರನೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಇದರಲ್ಲಿ ಪ್ರಜ್ವಲ್ ರೇವಣ್ಣ ಕಾಮಪುರಾಣದ ಮತ್ತಷ್ಟು ವಿವರಗಳು ಲಭ್ಯವಾಗಿದೆ.

ಹಾಸನದ ಅಶ್ಲೀಲ ವಿಡಿಯೋ ವೈರಲ್ ಪೈಕಿ ಜಿಲ್ಲಾ ಪಂಚಾಯತಿ ಸದಸ್ಯೆಯೊಬ್ಬರ ಮೇಲೆ ನಡೆದ ರೇಪ್ ಪ್ರಕರಣದ ಇಂಚಿಂಚೂ ಮೂರನೇ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ. 1,691 ಪುಟಗಳ ಚಾರ್ಜ್ ಶೀಟ್ ನ್ನು ಪ್ರಜ್ವಲ್ ವಿರುದ್ಧ ಎಸ್ ಐಟಿ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಪ್ರಕರಣದಲ್ಲಿ 120 ಸಾಕ್ಷ್ಯಗಳನ್ನು ಒದಗಿಸಲಾಗಿದೆ.

2020 ರಿಂದ 2023 ರ ಅವಧಿಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಹಂಚಿಕೆಯಾಗಿದ್ದ ಹಾಸನ ಎಂಪಿ ಕ್ವಾರ್ಟರ್ಸ್ ನಲ್ಲೇ ಅತ್ಯಾಚಾರ ನಡೆದಿತ್ತು ಎನ್ನಲಾಗಿದೆ. ದೇವೇಗೌಡರಿಗೆ ಹಂಚಿಕೆಯಾಗಿದ್ದ ಎಂಪಿ ಕಚೇರಿಯನ್ನೇ ಪ್ರಜ್ವಲ್ ತಾವು ಸಂಸದರಾಗಿದ್ದ ಸಂದರ್ಭದಲ್ಲಿ ಗೃಹಕಚೇರಿಯಾಗಿ ಬಳಸುತ್ತಿದ್ದ.

2020 ರ ಜನವರಿ-ಫೆಬ್ರವರಿ ತಿಂಗಳ ಅವಧಿಯಲ್ಲಿ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್ ನಲ್ಲಿ ಸೀಟು ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ಸದಸ್ಯೆಯೊಬ್ಬರು ಸಹಾಯ ಕೇಳಿಕೊಂಡು ಬಂದಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಬೇರೆ ಎಲ್ಲರನ್ನೂ ಕಳುಹಿಸಿದ ಬಳಿಕ ಸಂತ್ರಸ್ತೆಯನ್ನು ಮನೆಯ ಮೇಲಿನ ಮಹಡಿಯ ರೂಂಗೆ ಕರೆದೊಯ್ದಿದ್ದಾನೆ.

ಬಳಿಕ ಚಿಲಕ ಹಾಕಿ ಬಲವಂತವಾಗಿ ದೇಹದ ಅಂಗಾಂಗಗಳನ್ನು ತಡಕಿದ್ದಾರೆ. ನಂತರ ಬಟ್ಟೆ ಬಿಚ್ಚಲು ಹೇಳಿದ್ದಾನೆ. ಆದರೆ ಆಕೆ ನಿರಾಕರಿಸಿದಾಗ ನನ್ನ ಬಳಿ ಗನ್ ಇದೆ. ನಿನ್ನ ಗಂಡನನ್ನು ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ಬೇಡವೆಂದು ಹೇಳಿದರೂ ಕೇಳದೇ ಒಂದು ಕೈಯಿಂದ ಸಂತ್ರಸ್ತೆಯನ್ನು ಹಿಡಿದುಕೊಂಡ ಪ್ರಜ್ವಲ್ ಮತ್ತೊಂದು ಕೈಯಿಂದ ಮೊಬೈಲ್ ನಲ್ಲಿ ಆಕೆಯ ನಗ್ನ ದೇಹವನ್ನು ಚಿತ್ರೀಕರಿಸಿದ್ದ.

ಈ ವೇಳೆ ಅಸಹಾಯಕತೆಯಿಂದ ಸಂತ್ರಸ್ತೆ ಅಳುತ್ತಿದ್ದಾಗ, ಅಳಬಾರದು ನಗಬೇಕು ಎಂದು ವಿಕೃತಿ ಮೆರೆದಿದ್ದ. ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿ ಅದನ್ನು ವಿಡಿಯೋ ಮಾಡಿಟ್ಟುಕೊಂಡಿದ್ದ. ಎರಡು ದಿನಗಳ ಬಳಿಕ ಮತ್ತೆ ಆಕೆಗೆ ಕರೆ ಮಾಡಿ ನಿನ್ನ ವಿಡಿಯೋ ನನ್ನ ಬಳಿಯೇ ಇದೆ. ಈ ನಿಮಿಷದಲ್ಲಿ ನೀನು ಎಂಪಿ ಕಚೇರಿಗೆ ಬರದೇ ಇದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ.ತಾನು ಹೇಳಿದ ಒಳ ಉಡುಪನ್ನೇ ಧರಿಸಬೇಕು ಎನ್ನುತ್ತಿದ್ದ

 
ಹಾಗೆ ಮಾಡಬೇಡಿ ಎಂದು ಆಕೆ ಎಂಪಿ ಕಚೇರಿಗೆ ಬಂದಾಗ ಮತ್ತೊಮ್ಮೆ ಅತ್ಯಾಚಾರವೆಸಗಿದ್ದ. ಇದಾದ ಬಳಿಕವೂ ವ್ಯಾಟ್ಸಪ್ ಕರೆ ಮಾಡಿ ಆಕೆಯ ನಗ್ನ ದೇಹ ತೋರಿಸು, ಗುಪ್ತಾಂಗ ತೋರಿಸು ಎಂದು ಕಿರುಕುಳ ನೀಡುತ್ತಿದ್ದ. ವಿಡಿಯೋ ಕಾಲ್ ನಲ್ಲೇ ಆಕೆಯ ನಗ್ನ ದೇಹದ ಸ್ಕ್ರೀನ್ ಶಾಟ್ ಪಡೆಯುತ್ತಿದ್ದ. ಈ ವೇಳೆ ತನ್ನ ಮುಖ ಸರಿಯಾಗಿ ಕಾಣದಂತೆ ಕ್ಯಾಮರಾ ಮರೆ ಮಾಚುತ್ತಿದ್ದ. ಸಂತ್ರಸ್ತೆ ಮನೆಯಲ್ಲಿ ಒಬ್ಬರೇ ಇರುವುದನ್ನು ಖಾತ್ರಿ ಪಡಿಸಿಕೊಂಡು ಈ ಕೆಲಸ ಮಾಡುತ್ತಿದ್ದ. 2022 ರಲ್ಲಿ ಬೇಲೂರಿನಲ್ಲಿ ರಂಭಾಪುರಿ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಶರವನ್ನವರಾತ್ರಿ ದಸರಾ ಉತ್ಸವದಲ್ಲಿ ಭಾಗಿಯಾಗಿದ್ದ ಪ್ರಜ್ವಲ್ ಬಳಿಕ ರಾತ್ರಿ ಸಂತ್ರಸ್ತೆಗೆ ಕರೆ ಮಾಡಿ ಕ್ವಾರ್ಟರ್ಸ್ ಗೆ ಕರೆಸಿ ಮತ್ತೆ ಅತ್ಯಾಚಾರವೆಸಗಿದ್ದ ಎಂಬಿತ್ಯಾದಿ ಅಂಶಗಳು ಚಾರ್ಜ್ ಶೀಟ್ ನಲ್ಲಿ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

I Stand With You: ಬೆಂಗಳೂರಿನ ಜನತೆಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌

ಬೆಂಗಳೂರು ಮುಳುಗಿರುವಾಗ ಸಾಧನೆ ಸಮಾವೇಶ ಯಾಕೋ: ವಿಜಯೇಂದ್ರ ಲೇವಡಿ

Bengaluru Rains: ಬೆಂಗಳೂರಿನಲ್ಲಿ ಮಳೆ ಬಂದಾಗ ಸಮಸ್ಯೆಯಾಗೋದು ಹೊಸದೇನಲ್ಲ: ಡಿಕೆ ಶಿವಕುಮಾರ್

Bengaluru Rains: ಗ್ರೇಟರ್ ಬೆಂಗಳೂರು ಅಲ್ಲ ಇದು ವಾಟರ್ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಮಹಾಮಳೆಗೆ ಮೊದಲ ಬಲಿ: ಗೋಡೆ ಕುಸಿದು ಮಹಿಳಾ ಉದ್ಯೋಗಿ ಸಾವು

ಮುಂದಿನ ಸುದ್ದಿ