Publish Date: Thu, 12 Jun 2025 (11:03 IST)
Updated Date: Thu, 12 Jun 2025 (11:05 IST)
ಬೆಂಗಳೂರು: ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷಗಳಾಗಿವೆ. ಈ 11 ವರ್ಷದಲ್ಲಿ ಅವರು ಭಾರೀ ಕಡಿದು ಕಟ್ಟೆ ಹಾಕಿದ್ದಾರೆ ಬಿಡ್ರೀ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ ಮಾಡಿದ್ದಾರೆ.
ಮೋದಿ ಸರ್ಕಾರಕ್ಕೆ 11 ವರ್ಷವಾಗಿರುವ ಹಿನ್ನಲೆಯಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ 11 ವರ್ಷಗಳಲ್ಲಿ ಮೋದಿಯವರು ಸಾಧನೆಗಳನ್ನು ಕಡಿದು ಕಟ್ಟೆಹಾಕಿದ್ದಾರೆ. ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರ. ರೈತರು ವ್ಯವಸಾಯ ಮಾಡೋಣ ಎಂದು ಟ್ರ್ಯಾಕ್ಟರ್ ಮೇಲೆ 12% ಜಿಎಸ್ ಟಿ. ಸ್ವಲ್ಪ ದಿನ ಆದ ಮೇಲೆ ಟೈರ್ ಕೆಟ್ಟು ಹೋದ್ರೆ ಅದರ ಮೇಲೆ 18% ಜಿಎಸ್ ಟಿ. ಅದೂ ಹಾಳಾಗಿ ಹೋದ್ರೆ ಟ್ರ್ಯಾಕ್ಟರ್ ಬಿಡಿ ಭಾಗಗಳ ಮೇಲೆ 28% ಜಿಎಸ್ ಟಿ ಹಾಕಿದ್ದಾರೆ. ಈಗ ಹೇಳಿ ಕೇಂದ್ರದ ಮೋದಿ ಸರ್ಕಾರ ರೈತ ವಿರೋಧಿ ಅಲ್ವಾ? ಇದೇ ಅವರ ಸಾಧನೆ ಎಂದು ವ್ಯಂಗ್ಯ ಮಾಡಿದ್ದಾರೆ.
ಎನ್ ಡಿಎ ಎಂದರೆ ದೇಶ ನಾಶ ಮಾಡುವ ಒಕ್ಕೂಟ. ದೇಶದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಫೇಲ್ ಆಗಿದೆ. ರೈತರ ವಿಚಾರದಲ್ಲಿ ಫೇಲ್ ಆಗಿದೆ. ಕೇವಲ ನಮ್ಮ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಮಾಡೋದೊಂದೇ ಸಾಧನೆ ಎಂದಿದ್ದಾರೆ. ಆದರೆ ಇಂತಹ ದಾಳಿಗಳಿಗೆಲ್ಲಾ ಕಾಂಗ್ರೆಸ್ ನಾಯಕರು ಹೆದರಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.