Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪವರ್ ಗ್ರಿಡ್: ಮುಂದುವರೆದ ಪ್ರತಿಭಟನೆ- ಬಂಧನ

ಪವರ್ ಗ್ರಿಡ್: ಮುಂದುವರೆದ ಪ್ರತಿಭಟನೆ- ಬಂಧನ
ಆನೇಕಲ್ , ಬುಧವಾರ, 25 ಜುಲೈ 2018 (19:28 IST)
ಬನ್ನೇರುಘಟ್ಟ ಬಳಿಮತ್ತೆ ಮುಂದುವರೆದ ಪವರ್ ಗ್ರಿಡ್ ಪ್ರತಿಭಟನೆಯಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟ ನಡೆಯಿತು. ಆಗ ಕೆಲಸ ನಿಲ್ಲಿಸಲು ಹೋದ ರೈತ ಹೋರಾಟಗಾರರ ಬಂಧನವಾಗಿದೆ. 


ರೈತರಿಗೆ ಪರಿಹಾರ ನೀಡುವವರೆಗೂ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸುವಂತೆ ಸಿಎಂ ಸೂಚನೆಯಿದೆ. ಆದರೆ ಸಿಎಂ ಮಾತಿಗೂ ಕಿಮ್ಮತ್ತು ನೀಡದ ಪವರ್ ಗ್ರಿಡ್ ಅಧಿಕಾರಿಗಳು ತಮ್ಮ ಕೆಲಸ ಮುಂದುವರಿಸಿದ್ದರು. ಇದನ್ನು ಖಂಡಿಸಿ ಕೆಲಸ ನಿಲ್ಲಿಸಲು ಹೋದ ರೈತ ಹೋರಾಟಗಾರರ ಬಂಧನ ಮಾಡಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪವರ್ ಗ್ರಿಡ್ ಸಿಬ್ಬಂದಿ ಕೆಲಸ ನಡೆಸುತ್ತಿದ್ದಾರೆ. ರೈತರ ಜಮೀನಿಗೆ ಪರಿಹಾರ ನೀಡದೇ ಕೆಲಸ ಮುಂದುವರೆಸುತ್ತಿರುವ ಅಧಿಕಾರಿಗಳ ವಿರುದ್ಧ ರೈತರು ಗರಂ ಆಗಿದ್ದಾರೆ. ಕೆಲವು ರೈತರು ಕಂಬ ಏರಿ ಕುಳಿತು ಪ್ರತಿಭಟನೆ ಮುಂದುವರೆಸಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆಗೆ ಲಿಂಬೆಹಣ್ಣು ಸುರಿದು ಆಕ್ರೊಶ ವ್ಯಕ್ತಪಡಿಸಿದ ರೈತರು