Publish Date: Sun, 06 Nov 2022 (15:47 IST)
Updated Date: Sun, 06 Nov 2022 (15:49 IST)
ಅಮೆರಿಕದ ಪಾಪ್ ತಾರೆ ಆರನ್ ಕಾರ್ಟರ್ ನಿನ್ನೆ ಲಾಸ್ ಏಂಜಲೀಸ್ ಬಳಿಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ... ಕಾರ್ಟರ್ ಗಾಯನ ಮತ್ತು ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಮೊದಲು ತಮ್ಮ ಸಹೋದರನ ಹಿಟ್ ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್‌ನೊಂದಿಗೆ ಕೆಲಸ ಮಾಡಿದ್ದರು. ಶನಿವಾರ ಮಧ್ಯಾಹ್ನ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ವಕ್ತಾರರು ಕಾರ್ಟರ್ ಮೃತರಾಗಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ಟರ್ 9 ವರ್ಷ ವಯಸ್ಸಿನವರಾಗಿದ್ದಾಗ 1997 ರಲ್ಲಿ ತಮ್ಮ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದರು. ಅವರು ಕೆಲ ವರ್ಷಗಳಿಂದ ಡ್ರಗ್ಸ್ ವ್ಯಸನದ ಸಮಸ್ಯೆಗಳೊಂದಿಗೆ ಬಳಲುತ್ತಿದ್ರು. ಒಮ್ಮೆ ಸೆಲೆಬ್ರಿಟಿ ವೆಲ್‌ನೆಸ್ ಟಿವಿ ಶೋ ದಿ ಡಾಕ್ಟರ್ಸ್ನಲ್ಲಿ 2019 ರಲ್ಲಿ ಅವರು ಕಾಣಿಸಿಕೊಂಡಾಗ, ಖಿನ್ನತೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು.