Publish Date: Thu, 18 May 2023 (19:00 IST)
Updated Date: Thu, 18 May 2023 (19:41 IST)
ಕಾಂಗ್ರೆಸ್ ಶಾಸಕಾಂಗ ಸಭೆ ಹಿನ್ನೆಲೆ ಶ್ವಾಸನಾಳದಿಂದ ಇಂಧಿರಾ ಭವನದ ಭಾರತ್ ಜೋಡೋ ಸಭಾಂಗಣ ಪರಿಶೀಲನೆ ನಡೆಸಲಾಗ್ತಿದೆ.ನೂತನ ಸಿಎಂ ಘೋಷಣೆ ಮತ್ತು ಡಿಸಿಎಂ ಘೋಷಣೆಯನ್ನ ಕಾಂಗ್ರೆಸ್ ನಾಯಕರು ಮಾಡಲಿದ್ದಾರೆ.ಕಾಂಗ್ರೆಸ್ ನಾಯಕರ ಮಹತ್ವದ ಸಭೆ ಬಳಿಕ ಮಾಡಲಿದ್ದು,ಈ ಹಿನ್ನೆಲೆ ಸೂಕ್ತ ಭದ್ರತೆಯನ್ನ ಪೊಲೀಸ್ ಇಲಾಖೆ ಕೈಗೊಂಡಿದೆ.
ಕೆಪಿಸಿಸಿ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನ್ನ ಕೇಂದ್ರ ಡಿಸಿಪಿ ಶ್ರೀನಿವಾಸ್ ಗೌಡ,ಡಿಸಿಪಿ ಭೀಮಾಶಂಕರ ಗೋಳೆದ್ ನೇತೃತ್ವದಲ್ಲಿ ಭದ್ರತೆ ಮಾಡಲಾಗಿದೆ.6 ಎಸಿಪಿ, 25 ಇನ್ಸ್ಪೆಕ್ಟರ್ ,300 ಸಿಬ್ಬಂದಿಗಳಿಂದ ಬಂದೋಬಸ್ತ್ ಮಾಡಿದ್ದು,ಟ್ರಾಫಿಕ್ ನಿರ್ವಹಣೆಗೆ ಟ್ರಾಫಿಕ್ ಡಿಸಿಪಿ ಸಹ ಉಪಸ್ಥಿತಿ ಇದ್ದಾರೆ.