ಪೊಲೀಸ್ ವಶದಲ್ಲಿದ್ದ ಆರೋಪಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಪರಾರಿಯಾಗಲು ಯತ್ನಿಸಿದ
ಆರೋಪಿ ಕಾಲಿಗೆ ಪೊಲೀಸರಿಂದ ಫೈರಿಂಗ್ ನಡೆದಿದೆ.
ಪೊಲೀಸ್ ವಶದಲ್ಲಿದ್ದ ಆರೋಪಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದಾಗ ರೌಡಿ ಮೇಲೆ ಶಿವಮೊಗ್ಗ ಪೊಲೀಸರಿಂದ ಫೈರಿಂಗ್ ನಡೆದಿದೆ. ಘಟನೆಯಲ್ಲಿ ರೌಡಿ ಆಸಿಫ್ ಕಾಲಿಗೆ ಗುಂಡೇಟು ತಗುಲಿದೆ. ಕಳೆದ ವಾರ ಉದ್ಯಮಿ ಹೆವನ್ ಅಬೀಬ್ ಅಳಿಯ ಸಮಿವುಲ್ಲಾ ಮತ್ತು ಅನ್ಸರ್ ಅಪಹರಿಸಿದ್ದ ಚೋರ್ ಬಚ್ಚೆ ಗ್ಯಾಂಗ್ ನಲ್ಲಿ ಆಸೀಫ್ ಬಂಧಿತನಾಗಿದ್ದನು.
ಮತ್ತೊಬ್ವ ಆರೋಪಿಯ ಪತ್ತೆಗಾಗಿ ಆಸಿಫ್ ನನ್ನು ಕರೆದೊಯ್ದ ಸಂದರ್ಭದಲ್ಲಿ ಯುರಿನ್ ಗೆ ಹೋಗುವುದಾಗಿ ನೆಪ ಹೇಳಿ ನಂತರ ಅಲ್ಲೆ ಇದ್ದ ರಾಡಿನಿಂದ ತುಂಗಾ ನಗರ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾನೆ. ಅಷ್ಟೇ ಅಲ್ಲ ಏರ್ ಫೈರ್ ಮಾಡಿದರೂ ಹೆದರದ ಆರೋಪಿಯ ಬಲಗಾಲಿಗೆ ಫೈರ್ ಮಾಡಿ ಬಂಧನ ಮಾಡಲಾಗಿದೆ. ಆರೋಪಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.